Sports

ಧೋನಿ ದಾಖಲೆ ಅಳಿಸಿದ ರಿಷಬ್‌ ಪಂತ್

ರಿಷಬ್‌ ಪಂತ್‌ ಭಾರತ ಕ್ರಿಕೆಟ್‌ನ ಭರವಸಸೆಯ ಆಟಗಾರ. ಧೋನಿಯ ನಂತರ ಯಾರು ಭಾರತದ ವಿಕೆಟ್‌ ಕೀಪರ್‌ ಎಂಬ ಪ್ರಶ್ನೆಗೆ ಉತ್ತರ ರಿಷಬ್‌ ಪಂತ್.‌ ಬಿರುಸಿನ ಆಟಕ್ಕೆ ಹೆಸರುವಾಸಿಯಾಗಿರುವ ರಿಷಬ್‌ ಪಂತ್‌ ಧೋನಿ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಕೇವಲ 26 ಟೆಸ್ಟ್‌ ಪಂದ್ಯಗಳಲ್ಲಿ 100 ಮಂದಿಯನ್ನು ಔಟ್‌ ಮಾಡುವ ಮೂಲಕ ರಿಷಬ್‌ ನೂತನ ದಾಖಲೆ ಬರೆದಿದ್ದಾರೆ. ಧೋನಿ ಮತ್ತು ಸಹ ಅವರ ಹೆಸರಲ್ಲಿದ್ದ ದಾಖಲೆಯನ್ನು ರಿಷಬ್‌ ಪುಡಿಗಟ್ಟಿದ್ದಾರೆ. ಈ ಮುಂಚೆ ೧೦೦ ವಿಕೆಟ್‌ಗಳನ್ನು ತೆಗೆಯಲು ಧೋನಿ ೩೬ ಟೆಸ್ಟ್‌ ಪಂದ್ಯಗಳನ್ನಾಡಿದ್ದರು. ವೃದ್ಧಿಮಾನ್‌ ಸಹಾ ಅವರು ಕೂಡ ೧೦೦ ವಿಕೆಟ್‌ ತೆಗೆಯಲು ೩೬ ಪಂದ್ಯಗಳನ್ನು ಆಡಿದ್ದರು.

ರಿಷಬ್‌ ಪಂತ್‌ ಅತೀ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಭಾರತ ೬ ವಿಕೇಟ್‌ ಕೀಪರ್‌ ಮಾತ್ರ ೧೦೦ಕ್ಕೂ ಹೆಚ್ಚು ವಿಕೆಟ್‌ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ರಿಷಬ್‌ ಪಂತ್‌, ಧೋನಿ, ವೃದ್ಧಿಮಾನ್‌ ಸಹಾ, ಕಿರಣ್‌ ಮೋರೆ, ನಯನ್‌ ಮೋಂಗಿಯ, ಸೈಯದ್‌ ಕಿರ್ಮಾನಿ ಮಾತ್ರ ಈ ಸಾಧನೆ ಮಾಡಿದವರಾಗಿದ್ದಾರೆ.

Share Post