Crime

ವಿಡಿಯೋ: ಪಾಣಿಪತ್‌ ಬಿಜೆಪಿ ಶಾಸಕನ ಕಾರಿಗೆ ಬೆಂಕಿ

ಚಂಡಿಗಢ: ಹರಿಯಾಣದ ಪಾಣಿಪತ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಮೋದ್‌ ವಿಜ್‌ ಅವರ ಕಾರಿಗೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಪಾಣಿಪತ್‌ ಶಾಸಕ ಪ್ರಮೋದ್‌ ವಿಜ್‌ ಅವರು ಚಂಡಿಗಢದ ಎಂಎಲ್‌ಎ ಹಾಸ್ಟೆಲ್‌ ಪಾರ್ಕಿಂಗ್‌ನಲ್ಲಿ ತಮ್ಮ ಫಾರ್ಚೂನರ್‌ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ದುಷ್ಕರ್ಮಿ ಕಾರಿನ ಬಳಿ ಬರೋದು, ಕಾರಿನ ಗಾಜು ಒಡೆಯಲು ಪ್ರಯತ್ನಿಸೋದು ಹಾಗೂ ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಅಲ್ಲಿಂದ ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Share Post