Districts

ತರಕಾರಿ ಬೆಲೆ ದುಪ್ಪಟ್ಟು: ಎಲ್ಲೆಲ್ಲಿ ಎಷ್ಟೆಷ್ಟು?

ಹುಬ್ಬಳ್ಳಿ: ಅಕಾಲಿಕ ಮಳೆಯಿಂದಾಗಿ ರೈತರ ಬೆಳೆ ನೆಲಕಚ್ಚಿ ಹೋಗಿದೆ. ಹೀಗಾಗಿ ತರಕಾರಿ ಬೆಲೆಗಳೆಲ್ಲ ಗಗನಕ್ಕೇರಿದೆ. ಇದ್ದರಿಂದ ತರಕಾರಿಗಳೆಲ್ಲ ಬೇರೆ ಕಡೆ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಗ್ರಾಹಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ನಗರಗಳಿಗಿಂತಲೂ ಹಳ್ಳಿ ಕಡೆ ತರಕಾರಿ ಬೆಲೆಗಳು ಜಾಸ್ತಿಯಾಗಿದೆ. ಮೊನ್ನೆ ನಡೆದ ಬಾಗಲಕೋಟೆ ಸಂತೆಯಲ್ಲಿ ಕಳೆದ ಬಾರಿಗಿಂತಲೂ ಬೆಲೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಕಳೆದ ವಾರ ಬದನೆಕಾಯಿ ಕೆ.ಜಿಗೆ ೧೦೦ ಇತ್ತು. ಆದರೆ ಈ ಬಾರಿ ಒಂದು ಕೆ.ಜಿಗೆ ೨೦೦ ರೂಪಾಯಿ ಏರಿಕೆಯಾಗಿದೆ. ಜೊತೆಗೆ ಹಸಿ ಮೆಣಸಿನಕಾಯಿ ೧೫೦ ರೂ. ಬೆಂಡೆಕಾಯಿ ಬೆಲೆ ಕೆ.ಜಿಗೆ ೧೦೦ ರೂಪಾಯ ಏರಿಕೆಯಾಗಿದೆ. ಇದ್ದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬದನೆಕಾಯಿ ಬೆಲೆ ದಿಢೀರ್‌ ಹೆಚ್ಚಳವಾಗಿದೆ. ಕೆ.ಜಿಗೆ ೧೪೦ ರಿಂದ ೧೬೦ಕ್ಕೆ ಮಾರಾಟವಾಗುತ್ತಿದೆ. ಈಗಾಗಲೇ ತರಕಾರಿ ಬೆಲೆ ದುಪ್ಪಟ್ಟು ಆಗಿದ್ದರಿಂದ ಜೀವನ ನಡೆಸುವುದು ತುಂಬಾ ಕಷ್ಟಕರಬಾಗಿದೆ ಎಂದು ಸಾಮಾನ್ಯ ಜನರು ಹೇಳುತ್ತಿದ್ದಾರೆ.

Share Post