ನೈಟ್ ಕರ್ಪ್ಯೂ ನಿರ್ಧಾರದಲ್ಲಿ ಬದಲಾವಣೆಯಿಲ್ಲ: ಸಚಿವ ಸುಧಾಕರ್
ಬೆಂಗಳೂರು: ಕೊರೊನಾ, ಓಮಿಕ್ರಾನ್ ನಿಯಂತ್ರಣಕ್ಕಾಗಿ ವಿಧಿಸಿರುವ ನೈಟ್ ಕರ್ಫ್ಯೂ ವಿಚಾಋದಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ತಜ್ಞರ ಸಲಹೆ ಮೇರೆಗೆ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.
ಕೊರೊನಾ ಎರಡನೇ ಅಲೆ ಸೃಷ್ಟಿಸಿದ ಅವಾಂತರವನ್ನು ಜನತೆ ಒಮ್ಮೆ ನೆನಪು ಮಾಡಿಕೊಳ್ಳಿ. ಅನಾಹುತಗಳು ನಡೆಯುವ ಮುನ್ನ ತಡೆಯುವುದು ನಮ್ಮ ಕರ್ತವ್ಯ, ದಯವಿಟ್ಟು ಎಲ್ಲರೂ ಸರ್ಕಾರದ ಸೂಚನೆಗಳನ್ನು ಪಾಲಿಸಿ. ನೈಟ್ ಕರ್ಪ್ಯೂ ಜಾರಿ ಮಾಡಿರುವುದನ್ನು ವಿರೋಧಿಸುವುದು ಸರಿಯಲ್ಲ. ಈ ಹತ್ತು ದಿನಗಳ ವಿಧಿಸಿರುವ ನಿಷೇಧಾಜ್ಞೆಯನ್ನು ಎಲ್ಲರೂ ಅನುಸರಿಸಿ.
ಜನರ ಸಾಧಕ-ಬಾಧಕಗಳನ್ನು ನೋಡಿಕೊಂಡೇ ಈ ನಿಯಮಗಳನ್ನು ತಂದಿದ್ದೇವೆ. ಹತ್ತು ದಿನಗಳ ಬಳಿಕವೇ ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.