Cinema

ಹೊಸ ವರ್ಷಾಚರಣೆಗೆ ಗೋವಾಗೆ ಹಾರಿದ ಸಮಂತಾ

ಪಣಜಿ : ಸಮಂತಾ ವಿಚ್ಛೇದನದ ಬಳಿಕ ಸಖತ್‌ ಆಕ್ಟೀವ್‌ ಆಗಿದ್ದಾರೆ. ಇನ್ನು ಅವರ ಅಭಿನಯದ ಪುಷ್ಪ ಸಿನಿಮಾದ ಐಟಂ ಸಾಂಗ್‌ ಸಖತ್‌ ವೈರಲ್‌ ಆಗಿದೆ. ಸೆಕ್ಸಿ ಆಗಿರೋದು ತುಂಬಾ ಕಷ್ಟದ ಕೆಲಸ ಎಂದು ಕೂಡ ಸಮಂತಾ ಇನ್ಸ್ಟಾಗ್ರಾಂ ಅಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಚರ್ಚೆಯಾಗಿತ್ತು.

ಈಗಾಗಲೇ ಗೋವಾದಲ್ಲಿ ಬೀಡು ಬಿಟ್ಟಿರುವ ಸಮಂತಾ ತಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಈಗ ಸಮಂತಾ ನ್ಯೂ ಇಯರ್‌ ಮೂಡ್‌ನಲ್ಲಿದ್ದಾರೆ. ಸ್ನೇಹಿತರೊಂದಿಗೆ ಗೋವಾ ಪ್ರವಾಸ ಕೈಗೊಂಡಿರುವ ಸಮಂತಾ ಈ ಬಾರಿಯ ನ್ಯೂ ಇಯರ್‌ ಕೂಡ ಅಲ್ಲಿಯೇ ಆಚರಿಸಲಿದ್ದಾರೆ. ಗೋವಾ ಜಲಪಾತದಲ್ಲಿ ಸ್ನೇಹಿತೆಯರೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋ ಈಗ ಎಲ್ಲೆಡೆ ವೈರಲ್‌ ಆಗಿದೆ.

 

 

Share Post