ಯಕ್ಷಗಾನ ಕಲಾವಿದರಿಗೆ ಮತ್ತೆ ಸಂಕಷ್ಟ
ಬೆಂಗಳೂರು: ಅಂದಿನ ಕಾಲದಲ್ಲಿ ಯಕ್ಷಗಾನ ಮತ್ತು ಬಯಲಾಟ ಅಂದರೆ ಸಾಕು ಹಳ್ಳಿ ಕಡೆ ಜನರು ಟೆಂಟ್ ಹೋಗಿ ಮೊದಲು ಕುಳಿತುಕೊಳ್ಳವರು. ಅದು ರಾತ್ರಿಯಿಂದ ಶುರುವಾದ ಯಕ್ಷಗಾನ ಬೆಳಗ್ಗೆವರೆಗೂ ಇರುತ್ತಿತ್ತು. ಆದರೂ ಜನ ಬೆಳಗ್ಗೆ ವರೆಗೂ ಕಣ್ಣು ಮಿಟುಕಿಸದೆ ನೋಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಮತ್ತ ಬಯಲಾಟಗಳು ನಶಿಸುತ್ತ ಬಂದಿದೆ. ಯುಗಪೀಳಿಗೆಯಿಂದ ಅದನ್ನು ನೋಡುವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಕೆಲ ಊರುಗಳಲ್ಲಿ ಇನ್ನೂ ಕೂಡ ಯಕ್ಷಗಾನಗಳಿವೆ. ಹಳೆ ತಲೆಮಾರುಗಳು ಇಂದಿಗೂ ಯಕ್ಷಗಾನ ಇಷ್ಟ ಪಡುತ್ತಾರೆ. ಆದರೆ ಮೊದಲಿನ ತರ ಟೆಂಟ್, ಬೀದಿಗಳಲ್ಲಿ ಮಾಡುತ್ತಿಲ್ಲ. ಬದಲಾಗಿ ಜಾತ್ರೆ, ಹಬ್ಬ, ಯಾರಾದ್ರೂ ಹರೆಕೆ ಇಂತಹ ಇದ್ದರೆ ಮಾತ್ರ ಯಕ್ಷಗಾನ ಮಾಡುತ್ತಾರೆ. ಇದೀಗ ಅವರಿಗೂ ಕೂಡ ಕೊರೋನಾ ಬಿಸಿ ತಟ್ಟಿದೆ. ಕೊರೋನಾ ನಿಯಂತ್ರಿಸುವ ಸಲುವಾಗಿ ಸರ್ಕಾರ ಕೆಲ ನಿರ್ಬಂಧ ಹೇರಿದೆ. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಿದ್ದು, ಧಾರ್ಮಿಕ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಕೆಲ ನಿರ್ಬಂಧ ಹೇರಿದೆ.
ಇನ್ನು ಮಂಗಳೂರಿನಲ್ಲಿ ಯಕ್ಷಗಾನ ಇಂದಿಗೂ ನಡೆಯುತ್ತಿದೆ. ಅಲ್ಲಿ ಧಾರ್ಮಿಕ ಕ್ಷೇತ್ರಗಳು ಜಾಸ್ತಿಯಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮೋತ್ಸವ, ವಾರ್ಷಿಕ ಉತ್ಸವಗಳು ನಡೆಯುತ್ತಲೇ ಇರುತ್ತದೆ. ಆದರೆ ಕೊರೋನಾ ಹೆಚ್ಚಳದಿಂದ ಸರ್ಕಾರ ಎಲ್ಲ ಸ್ಥಗಿತಗೊಳಿಸದೆ. ಇದ್ದರಿಂದ ಯಕ್ಷಗಾನ ಕಲಾವಿದರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಕಳೆದ ಬಾರಿಯೇ ಕಲಾವಿದರು ಆರ್ಥಿಕವಾಗಿ ಕಷ್ಟ ಅನುಭವಿಸಿದ್ದರು. ಇದೀಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ. ಇನ್ನು ಮಂಗಳೂರಿನಲ್ಲಿ ಹಲವು ಉತ್ಸವಗಳು ನಡೆಯುತ್ತಿದ್ದು, ಯಕ್ಷಗಾನ ಕಾರ್ಯಕ್ರಮ ನಿಗದಿಯಾಗಿತ್ತು. ವೀಕೆಂಡ್ ಕರ್ಫ್ಯೂ ನಿಂದಾಗಿ ಎಲ್ಲ ಕಾರ್ಯಕ್ರಮಗಳು ರದ್ದಾಗಿದೆ.