Districts

ಕಾಂಗ್ರೆಸ್‌ ಪಾದಯಾತ್ರೆ ಕುರಿತು ಕುಮಾರಸ್ವಾಮಿ ವ್ಯಂಗ್ಯ

ಬಿಡದಿ: ನೈಟ್‌ ಕರ್ಪ್ಯೂ ಬಗ್ಗೆ ಮಾತನಾಡುತ್ತಾ ಫೆಬ್ರವರಿ ಅಂತ್ಯದೊಳಗೆ ವೈರಸ್‌ ಜಾಸ್ತಯಾಗುವ ಬಗ್ಗೆ ತಜ್ಞರು ಹೇಳಿದ್ದಾರೆ. ಅದರಿಂದ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಆದ್ರೆ ಇದು ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೆ, ರಾಜಕೀಯ ನಾಯಕರಿಗೂ ಅನ್ವಯ ಆಗ್ಬೇಕು. ರಾಜಕೀಯ ನಾಯಕರ ಸಭೆ ಸಮಾರಂಭಗಳಿಗೀ ಈ ಕಾನೂನು ಅನ್ವಯಿಸಬೇಕು. ಈ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರುತ್ತಾ, ಕಾಂಗ್ರೆಸ್‌ ನಾಯಕರು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪಾದಯಾತ್ರೆ ಕೈಗೊಂಡಿದಾರೆ. ಇದು ಬೇಕಾ..?

ಅನ್ಯಾಯ ಆಗಿರುವ ಕಡೆ ನ್ಯಾಯ ಕೇಳಬೇಕು ಅದು ಬಿಟ್ಟು ರಸ್ತೆ ಉದ್ದಗಲಕ್ಕೂ ಹೋರಾಟ ಮಾಡ್ತಾ, ಟೈರ್‌ ಸುಡ್ತಾ ಗೊಂದಲ ವಾತಾವರಣ ಸೃಷ್ಟಿ ಮಾಡುದ್ರೆ ಹೇಗೆ? ನಾನು ಏನ್‌ ಮಾಡಿದಿನಿ ಅಂತ ಅವರ ಬಳಿ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ, ನೀರಾವರಿಗೆ ಜೆಡಿಎಸ್‌ ಏನೇನು ಮಾಡಿದೆ ಅಂತ ಜನರಿಗೆ ಗೊತ್ತು. ಪಂಚೆ ಹಾಕೊಂಡು ಶೋ ಮಾಡೋರೆಲ್ಲ ರೈತರು ಆಗಲ್ಲ, ಮತ ಪಡೆಯೋಕ್ಕಸ್ಕರ ಇಂತಹ ಪಾದಯಾತ್ರೆ ಮಾಡುದ್ರೆ ಏನು ಪ್ರಯೋಜವಿಲ್ಲ. ಸುಖಾ ಸುಮ್ಮನೆ ರೈತರ ಮಕ್ಕಳು ಅಂತ ಹೇಳಿದ್ರೆ ಆಗಲ್ಲ ಅವರ ಕಷ್ಟ ಕೂಡ ತಿಳಿದಿರಬೇಕು. ನಾವು ರೈತರ ಪರವಾಗಿ ಎನೆಲ್ಲಾ ಮಾಡಿದ್ದೇವೆ ಅಂತ ರೈತರಿಗೆ ತಿಳಿದಿದೆ. ಈ ಪಾದಯಾತ್ರೆ ಎಲ್ಲ ಬರೀ ಶೋಕಿಗಾಗಿ ಎಂದು ವ್ಯಂಗ್ಯವಾಡಿದ್ರು.

Share Post