CrimeDistricts

ಮಗುವನ್ನು ಕೊಂದು ಕಾರಿನಲ್ಲಿ ಸಾಗಣೆ; ಮಹಿಳಾ ಉದ್ಯಮಿ ಅರೆಸ್ಟ್‌!

ಚಿತ್ರದುರ್ಗ; ಗೋವಾದ ಹೋಟೆಲ್‌ನಲ್ಲಿ ತನ್ನದೇ ಮಗುವನ್ನು ಕೊಂದು, ಮೃತದೇಹವನ್ನು ಸೂಟ್‌ಕೇಸ್‌ನಲ್ಲಿಟ್ಟು ಬೆಂಗಳೂರಿಗೆ ಸಾಗಿಸುತ್ತಿದ್ದ ಮಹಿಳಾ ಉದ್ಯಮಿಯನ್ನು ಬಂಧಿಸಲಾಗಿದೆ. ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಖಾಸಗಿ ಕಂಪನಿ ಸ್ಥಾಪಕಿಯಾಗಿರುವ ಸುಚನಾ ಸೇಠ್‌ ಅವರೇ ಬಂಧಿತ ಮಹಿಳೆಯಾಗಿದ್ದಾರೆ. ಇವರು ಗೋವಾದಲ್ಲಿ ಹೋಟೆಲ್‌ನಲ್ಲಿ ತನ್ನದೇ ಮಗುವನ್ನು ಕೊಂದಿದ್ದಾರೆ. ಅನಂತರ ಮಗುವಿನ ದೇಹವನ್ನು ಸೂಟ್‌ಕೇಸ್‌ನಲ್ಲಿಟ್ಟು, ಟ್ಯಾಕ್ಸಿ ಮಾಡಿಕೊಂಡು ಬೆಂಗಳೂರಿಗೆ ಬರುತ್ತಿದ್ದರು.

ಮಗುವಿನ ಮೃತದೇಹವಿದ್ದ ಸೂಟ್‌ಕೇಸ್‌ ಟ್ಯಾಕ್ಸಿಯ ಡಿಕ್ಕಿಯಲ್ಲಿರಿಸಲಾಗಿತ್ತು. ಸುಚನಾ ಸೇಠ್ ಗೋವಾದ ಹೋಟೆಲ್​ವೊಂದರಲ್ಲಿ ತನ್ನ ಮಗುವಿನೊಂದಿಗೆ ತಂಗಿದ್ದರು.  ಟ್ಯಾಕ್ಸಿ ಹಿಡಿದು ಬೆಂಗಳೂರಿಗೆ ಹೊರಡುವ ಸಂದರ್ಭದಲ್ಲಿ ಹೋಟೆಲ್​​ ಸಿಬ್ಬಂದಿ, ನಿಮ್ಮ ಮಗು ಎಲ್ಲಿ ಎಂದು ಕೇಳಿದ್ದಾರೆ. ಈ ವೇಳೆ ಸುಚನಾ ಸೇಠ್, ಸಂಬಂಧಿಕರ ಮನೆಗೆ ಕಳುಹಿಸಿದ್ದೇನೆ ಎಂದು ಸುಳ್ಳು ಹೇಳಿ ಅಲ್ಲಿಂದ ಹೊರಟಿದ್ದಾರೆ.

ಹೋಟೆಲ್​ ಸಿಬ್ಬಂದಿಗೆ ಈ ಬಗ್ಗೆ ಅನುಮಾನ ಬಂದಿದೆ. ಇನ್ನು ರೂಂ ಸ್ವಚ್ಛಗೊಳಿಸುವ ಸಮಯದಲ್ಲಿ ರಕ್ತದ ಕಲೆಗಳು ಬೇರೆ ಕಾಣಿಸಿವೆ. ಹೀಗಾಗಿ ತಕ್ಷಣವೇ ಹೋಟೆಲ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಯಾರಿವರು ಸೂಚನಾ ಸೇಠ್?
ಸೂಚನಾ ಸೇಠ್‌ ಅವರು ಬೆಂಗಳೂರಿನ ದಿ ಮೈಂಡ್ ಫುಲ್ AI ಲ್ಯಾಬ್ ಕಂಪನಿಯ ಸಿಇಒ ಆಗಿದ್ದಾರೆ. ಇವರ ಲಿಂಕ್ಡನ್‌ ಪ್ರೊಫೈಲ್‌ನಲ್ಲಿ AI ಎಥಿಕ್ಸ್ ಎಕ್ಸ್‌ಫರ್ಟ್ ಎಂದು ಉಲ್ಲೇಖ ಮಾಡಿದ್ದಾರೆ. ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಕೆಲಸ ಮಾಡಿ ಬಂದಿರುವ ಸೂಚನಾ ‌ಸೇಠ್, AI ಎಥಿಕ್ಸ್ ಲಿಸ್ಟ್ ನಲ್ಲಿ ‌ನೂರು ಮಂದಿ ಬ್ರಿಲಿಯೆಂಟ್ ಮಹಿಳೆಯರಲ್ಲಿ ಒಬ್ಬರು ಎಂದು ಬರೆಯಲಾಗಿದೆ.

Share Post