ಸಿಲಿಕಾನ್‌ಸಿಟಿಯಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ ಗೊತ್ತಾ?
ಬೆಂಗಳೂರು: ಹಲವು ಪ್ರದೇಶಗಳಲ್ಲಿ ಡಿಸೆಂಬರ್ 26 ಹಾಗೂ 27ರಂದು ವಿದ್ಯುತ್ ಕಡಿತ ಮಾಡಿ ಕಾಮಗಾರಿ ಮಾಡಲು ಮುಂದಾಗಿದೆ. ಇದರಿಂದ ಹಲವು ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ಇರುವುದರಿಂದ ಬೆಸ್ಕಾಂ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಡಿಸೆಂಬರ್ 26 ಹಾಗೂ 27ರಂದು ವಿದ್ಯುತ್ ಕಡಿತ ಮಾಡಿ ಕಾಮಗಾರಿ ಮಾಡಲು ಮುಂದಾಗಿದೆ. ಇದರಿಂದ ಹಲವು ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಅದು ಎಲ್ಲೆಲ್ಲಿ ನೋಡೋಣ ಬನ್ನಿ
ಟಾಟಾ ಐಬಿಎಂ, ಎಸ್.ಜೆ.ಆರ್. ಪಾರ್ಕ್, ಸುಮಧುರಾ ಅಪಾರ್ಟ್‌ಮೆಂಟ್ ಸಮುಚ್ಚಯ, ನಲ್ಲೂರಹಳ್ಳಿ, ಯುಟಿಎಲ್ ಕಂಪನಿ, ವಿ.ಕೆ.ಟೆಕ್ ಪಾರ್ಕ್, ಗಾಯತ್ರಿ ಟೆಕ್ ಪಾರ್ಕ್, ಮೈಕ್ರೊ ಚಿಪ್, ವೈದೇಹಿ ಆಸ್ಪತ್ರೆ, ಸತ್ಯ ಸಾಯಿ ಬಾಬಾ ಆಸ್ಪತ್ರೆ, ಚನ್ನಮ್ಮ ಬಡಾವಣೆ, ಗ್ರಾಫೈಟ್ ಸಿಗ್ನಲ್, ಆಕಾಶ್ ಟೆಕ್‌ಪಾರ್ಕ್, ಜನತಾ ಕಾಲೋನಿ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಬಡಾವಣೆ, ವಿದ್ಯಾಪೀಠ ರಸ್ತೆ, ಡಿ.ಬಿ. ಕಲ್ಲು, ಬಿ.ಜಿ.ಎಸ್. ಆಸ್ಪತ್ರೆ ರಸ್ತೆ, ಸಿದ್ಧಗಂಗಾ ಬಡಾವಣೆ, ಮಾರಣ್ಣ ಬಡಾವಣೆ, ಉಲ್ಲಾಳ ನಗರ, ಮಾರುತಿನಗರ, ಕುವೆಂಪು ಮುಖ್ಯ ರಸ್ತೆ, ಜಿ.ಕೆ. ಗಲ್ಲಿ, ಬಿಇಎಲ್ 1ನೇ ಮತ್ತು 2ನೇ ಹಂತ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ತುರ್ತು ನಿರ್ವಹಣಾ ಕಾಮಗಾರಿ ಇರುವ ಕಾರಣ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.