International

ಮಕ್ಕಳಿಗೂ ಲಸಿಕೆ ಘೋಷಿಸಿದ ಈಕ್ವೆಡಾರ್‌ ದೇಶ

ಕ್ವಿಟೊ : ಕೊರೊನಾ ಲಸಿಕೆ ಕೇವಲ ೧೮ ವರ್ಷ ಮೇಲ್ಪಟ್ಟವರಿಗೆ ಮಾತ್ರ ಹಾಕಲಾಗ್ತಿತ್ತು. ಮಕ್ಕಳಿಗೆ ಲಸಿಕೆ ನೀಡಿರಲಿಲ್ಲ. ಆದರೆ ಈಗ ಈಕ್ವೆಡಾರ್‌ ದೇಶ ಈ ಸಾಧನೆ ಮಾಡಿದೆ. ೫ ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಕೊರೊನಾ ಲಸಿಕೆ ಕಡ್ಡಾಯಗೊಳಿಸಿ, ಮಕ್ಕಳಿಗೂ ಲಸಿಕೆ ಕಡ್ಡಾಯಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

ಕೋವಿಡ್‌ ರೂಪಾಂತರಿ ಓಮಿಕ್ರಾನ್‌ ಹೆಚ್ಚಾಗುತ್ತಿದ್ದಂತೆ ಈಕ್ವೆಡಾರ್‌ ದೇಶ ಈ ನಿರ್ಣಯ ತೆಗೆದುಕೊಂಡಿದೆ. ಗುರುವಾರ ಮಕ್ಕಳಿಗೆ ಲಸಿಕೆ ಕಡ್ಡಾಯಗೊಳಿಸಿರುವುದರ ವಿಷಯವಾಗಿ ಆದೇಶ ಹೊರಡಿಸಿದೆ.

ಈಕ್ವೆಡಾರ್‌ನ 1.7 ಕೋಟಿ ಜನಸಂಖ್ಯೆಯಲ್ಲಿ ಸುಮಾರು 69% ಜನರು ಇಲ್ಲಿಯ ವರೆಗೆ ಲಸಿಕೆಯ 2 ಡೋಸ್‌ಗಳನ್ನು ಪಡೆದಿದ್ದಾರೆ. 9 ಲಕ್ಷ ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ. ಇದೀಗ 5 ವರ್ಷ ಮೇಲ್ಪಟ್ಟ ಮಕ್ಕಳೂ ಲಸಿಕೆ ಪಡೆಯಲು ಅರ್ಹರು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Share Post