EconomyNational

ಟೋಕನೈಸೇಶನ್‌ ಜಾರಿ – 6 ತಿಂಗಳ ಮುಂದೂಡಿಕೆ

ನವದೆಹಲಿ : ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಪಡೆಯುವುದಕ್ಕೆ ಪರ್ಯಾಯವಾಗಿ ಟೋಕನೈಸೇಶನ್ನ ಅನ್ನು ಜಾರಿಗೊಳಿಸಲು RBI ಆದೇಶಿಸಿತ್ತು. ಇದೇ ಜನವರಿ ೧ರಿಂದ ಈ ತಂತ್ರಜ್ಞಾನ ಜಾರಿಗೊಳಿಸುವ ಬಗ್ಗೆ RBI  ಚಿಂತಿಸಿತ್ತು. ಆದರೆ ಈಗ ಇದನ್ನು ಮತ್ತೆ ೬ತಿಂಗಳು ಮುಂದೂಡಿದೆ.

ಟೋಕನೈಸೇಶನ್‌ ನಿಯಮವನ್ನು ಅನುಸರಿಸಲು ಬ್ಯಾಂಕುಗಳು ಕೆಲವು ದಿನಗಳ ಕಾಲಾವಕಾಶ ಕೇಳಿರುವುದರಿಂದಲೇ RBI ಈ ನಿಯಮ ಜಾರಿಯನ್ನು ಮುಂದೂಡಿದೆ.

ಟೋಕನೈಸೇಶನ್‌ ಅನುಸರಿಸಲು ಶುರುಮಾಡಿದರೆ ಯಾವುದೇ ಆನ್‌ಲೈನ್‌ ಕಂಪನಿಗಳು ಕೂಡ ನಿಮ್ಮ ಕಾರ್ಡ್‌ನ ಗೌಪ್ಯ ಮಾಹಿತಿಗಳನ್ನು ಸೇವ್‌ ಮಾಡಿಕೊಳ್ಳುವಂತಿಲ್ಲ. ಈಗ ತಮ್ಮ ಬಳಿ ಇರುವ ಎಲ್ಲಾ ಗ್ರಾಹಕರ ಬ್ಯಾಂಕಿಂಗ್‌ ಸಂಬಂಧಿಸಿದ ವಿವರಗಳನ್ನು ಅಳಿಸಿಹಾಕಬೇಕಿದೆ.

ಇದರಿಂದ ಆನ್‌ಲೈನ್‌ ಫ್ರಾಡ್‌ ಕಮ್ಮಿಯಾಗಲಿದೆ ಎಂದು  RBI ತಿಳಿಸಿದೆ. ಆರ್‌ಬಿಐ 2022ರ ಜನವರಿ 1ರಂದು ಟೋಕನೈಸೇಶನ್ ಜಾರಿಗೆ ಬರುವುದಿಲ್ಲ. ಬದಲಾಗಿ 2022ರ ಜುಲೈ 1ರಿಂದ ಜಾರಿಗೆ ತರಲಿದೆ.  2022ರ ಜೂನ್ 30ರ ನಂತರ ಕಾರ್ಡ್ ವಿವರಗಳನ್ನು ಕೇವಲ ವಿತರಣಾ ಕಂಪನಿಗಳು ಮಾತ್ರವೇ ಸಂಗ್ರಹಿಸಿ ಇಟ್ಟುಕೊಳ್ಳಲಿದ್ದು, ಬೇರೆಡೆ ಸಂಗ್ರಹಿಸಿ ಇಡಲಾದ ಕಾರ್ಡ್ ವಿವರಗಳನ್ನು ನಾಶಪಡಿಸುವುದಾಗಿ ಆರ್‌ಬಿಐ ತಿಳಿಸಿದೆ.

Share Post