ಕಾನ್ಪುರ ಉದ್ಯಮಿ ಮನೆಯಲ್ಲಿ 150 ಕೋಟಿ ರೂಪಾಯಿ ಪತ್ತೆ..!
ಕಾನ್ಪುರ: ಉತ್ತರ ಪ್ರದೇಶದ ಖ್ಯಾತ ಉದ್ಯಮಿ ಮನೆಯಲ್ಲಿ ಸುಮಾರು ೧೫೦ ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಸಮಾಜವಾದಿ ಪಾರ್ಟಿ ನಾಯಕರೂ ಆಗಿರುವ ಪಿಯೂಷ್ ಜೈನ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಈ ಬೃಹತ್ ಮೊತ್ತದ ಹಣ ಪತ್ತೆಯಾಗಿದ್ದಾರೆ. ಅಧಿಕಾರಿಗಳ ಹಣವನ್ನು ಎಣಿಸಲಾದೆ ಸುಸ್ತಾಗಿದ್ದಾರೆ ಎಂದು ತಿಳಿದುಬಂದಿದೆ.
ಸುಗಂಧ ದ್ರವ್ಯಗಳ ಉದ್ಯಮಿಯಾಗಿರುವ ಪಿಯೂಷ್ ಜೈನ್ ನಕಲಿ ಇನ್‌ವಾಯ್ಸ್ ಹಾಗೂ ಇ – ವೇ ಬಿಲ್‌ಗಳ ಮೂಲಕ ತೆರಿಗೆ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನ್ಪುರದಲ್ಲಿರುವ ಪಿಯೂಷ್ ಮನೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳೇ ಬೆಚ್ಚಿ ಬಿದ್ದಿದಾರೆ. ನಿನ್ನೆ ದಾಳಿ ನಡೆಸಿದ ಅಧಿಕಾರಿಗಳು ಇಂದು ಬೆಳಗಿನವರೆಗೂ ಹಣ ಎಣಿಸಿದ್ದು, ಸುಮಾರು 150 ಕೋಟಿ ರೂಪಾಯಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಪಿಯೂಷ್ ಸಮಾಜವಾದಿ ಪಕ್ಷದ ನಾಯಕರಾಗಿದ್ದಾರೆ. ಅವರು ಇತ್ತೀಚೆಗೆ ಸಮಾಜವಾದಿ ಸೆಂಟ್ ಹೆಸರಿನಲ್ಲಿ ಕಂಪನಿ ತೆರೆದು ಸುಗಂಧ ದ್ರವ್ಯದ ವ್ಯವಹಾರವನ್ನು ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ, ಗುಜರಾತ್ ಮತ್ತು ಮುಂಬೈ ಸೇರಿದಂತೆ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅಧಿಕಾರಿಗಳು ಇನ್ನೂ ಶೋಧ ನಡೆಸುತ್ತಿದ್ದಾರೆ.