BengaluruNational

CBSE ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌

ನವದೆಹಲಿ : ೧೦ ಮತ್ತು ೧೨ನೇ ತರಗತಿಯ ಬೋರ್ಡ್‌ ಪರೀಕೆಯನ್ನು ಬರೆದಿರುವ ೩೩ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ವರ್ಷ ಬೋರ್ಡ್‌ ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವುದಾಗಿ ಮಂಡಳಿ ತೀರ್ಮಾನಿಸಿದೆ.

ಹೊಸ ಮಲ್ಟಿಪಲ್‌ ಚಾಯ್ಸ್‌ ಕ್ವಷನ್‌ ಸ್ವರೂಪದ ಟರ್ಮ್‌ ೧ CBSE ಪರೀಕ್ಷೆಗಳು ಕಷ್ಟವಾಗಿತ್ತು. ಇದೇ ಸಂದರ್ಭದಲ್ಲಿ ಶಿಕ್ಷಣ ಮಂಡಳಿ ಯಾವುದೇ ಸಿಬಿಎಸ್‌ಇ ವಿದ್ಯಾರ್ಥಿಗಳನ್ನು ಉತ್ತೀರ್ಣ ಅಥವಾ ಅನುತ್ತೀರ್ಣಗೊಳಿಸದಂತೆ ನಿರ್ಧರಿಸಿದೆ.

ಮಂಡಳಿಯ ಪ್ರಕಾರ ಕೇವಲ ಮಾರ್ಕ್ಸ್‌ ಅಷ್ಟೇ ಇರಲಿದೆ ಆದರೆ ಪಾಸ್‌, ಫೇಲ್‌, ರಿಪೀಟರ್‌ ಅಥವಾ ಕಂಪಾರ್ಟ್ಮೆಂಟ್‌ ಗ್ರೇಡ್‌ಗಳನ್ನು ನೀಡುವುದಿಲ್ಲ. ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಟರ್ಮ್-1 ಬೋರ್ಡ್ ಪರೀಕ್ಷೆಯ ಫಲಿತಾಂಶ ಜನವರಿಯಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.

Share Post