Health

ಫೆಬ್ರವರಿ ವೇಳೆಗೆ ಕೊವಿಡ್‌ 3 ಅಲೆ ಹೆಚ್ಚಳ; ಐಐಟಿ ತಜ್ಞರ ಎಚ್ಚರಿಕೆ..!

ಕಾನ್ಪುರ: ಒಮಿಕ್ರಾನ್‌ ಭೀತಿಯ ನಡುವೆಯೇ ತಜ್ಞರು ಮತ್ತೊಂದು ಆಘಾತಕಾರಿ ಸುದ್ದಿ ನೀಡಿದ್ದಾರೆ. ೨೦೨೨ರ ಫೆಬ್ರವರಿ ವೇಳೆಗೆ ಕೊರೋನಾ ಮೂರನೆ ಅಲೆ ಉತ್ತುಂಗದಲ್ಲಿರುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕಾನ್ಪುರದ ಐಐಟಿ ತಜ್ಞರು ಹೇಳಿದ್ದಾರೆ.

ಈ ಕುರಿತು ಆರೋಗ್ಯ ವಿಜ್ಞಾನಗಳಿಗೆ ಸಂಬಂಧಿಸಿದ ಆನ್‌ಲೈನ್ ತಾಣ ‘ಮೆಡ್‌ಆರ್‌ಎಕ್ಸ್‌ಐವಿ’ಯಲ್ಲಿ ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಗತ್ತಿನ ಬೆಳವಣಿಗೆಗಳನ್ನು ಗಮನಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಭಾರತದಲ್ಲಿ ಕೋವಿಡ್ ಮೂರನೇ ಅಲೆ ಈಗಾಗಲೇ ಆರಂಭವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ಫೆಬ್ರುವರಿಯಲ್ಲಿ ಗರಿಷ್ಠಮಟ್ಟ ತಲುಪಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Share Post