Health

ರಾಜ್ಯದಲ್ಲಿ ಇಂದು ಒಂದೇ ದಿನ 12 ಓಮಿಕ್ರಾನ್‌ ಕೇಸ್‌ ಪತ್ತೆ

ಬೆಂಗಳೂರು : ಆರೋಗ್ಯ ಸಚಿವ ಡಾ ಸುಧಾಕರ್‌ ಅವರು ಟ್ವೀಟ್‌ ಮಾಡಿದ್ದು, ರಾಜ್ಯದಲ್ಲಿ ಇಂದು ೧೨ ಹೊಸ ಓಮಿಕ್ರಾನ್‌ ಕೇಸ್‌ಗಳು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಮೂರು ಜನರನ್ನು ಹೊರತು ಪಡಿಸಿದರೆ ಇನ್ನೆಲ್ಲರೂ ವಿದೇಶದಿಂದ ಬಂದವರೇ ಆಗಿದ್ದಾರೆ. ಸದ್ಯ ಇವರನ್ನೆಲ್ಲಾ ಐಸೋಲೇಟ್‌ ಮಾಡಲಾಗಿದೆ.

ಈ ಪೈಕಿ ಒಬ್ಬರು ಮಂಗಳೂರು, ಇನ್ನೊಬ್ಬರು ಮೈಸೂರಿನವರಾಗಿದ್ದಾರೆ. ಮಿಕ್ಕೆಲ್ಲಾ ೧೦ ಜನರೂ ಕೂಡ ಬೆಂಗಳೂರಿನವರೇ ಆಗಿದ್ದಾರೆ.

ಟ್ವಿಟರ್‌ನಲ್ಲಿ ಇರುವ ಮಾಹಿತಿ

Share Post