ಬೆಂಗಳೂರು ನಗರದ ಮಂದಿ 100% ಡಬಲ್ ವ್ಯಾಕ್ಸಿನೇಟೆಡ್
ಬೆಂಗಳೂರು : ಓಮಿಕ್ರಾನ್ ರೂಪಾಂತರಿಯ ಭಯದ ನಡುವೆ ಬೆಂಗಳೂರಿಗರಿಗೊಂದು ಸಿಹಿ ಸುದ್ದಿ ದೊರೆತಿದೆ. ಬಿಬಿಎಂಪಿ ವಲಯ ಹೊರತು ಪಡಿಸಿ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಜನರಿಗೂ ಸರ್ಕಾರ ಎರಡು ಡೋಸ್ ಲಸಿಕೆ ಹಾಕಿದೆ.
ಬೆಂಗಳೂರು ನಗರದಲ್ಲಿ ಶೇ೧೦೦ರಷ್ಟು ಜನರು ಡಬಲ್ ವ್ಯಾಕ್ಸಿನ್ ಪಡೆದಿದ್ದಾರೆ. ಈ ಮೈಲಿಗಲ್ಲನ್ನು ತಲುಪಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಜ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಬೆಂಗಳೂರು ನಗರ ಪಾತ್ರವಾಗಿದೆ. ಕರ್ನಾಟಕದಲ್ಲಿ ಶೇ ೭೫ರಷ್ಟು ಜನರು ಡಬಲ್ ವ್ಯಾಕ್ಸಿನ್ ಪಡೆದಿದ್ದಾರೆ ಎಂಬ ಮಾಹಿತಿಯನ್ನೂ ಕೂಡ ಸುಧಾಕರ್ ಹಂಚಿಕೊಂಡಿದ್ದಾರೆ.
ಟ್ವೀಟ್‌ನಲ್ಲಿ ಏನಿದೆ ?