International

ಲಸಿಕೆ ಹಾಕಿಸದಿದ್ದರೆ ವೇತನ ಇಲ್ಲ – ಇಂಟೆಲ್‌ ಸಂಸ್ಥೆ

ವಾಷಿಂಗ್ಟನ್‌ : ಕೆಲವು ದಿನಗಳ ಹಿಂದೆಯಷ್ಟೇ ಗೂಗಲ್‌ ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿತ್ತು. ಲಸಿಕೆ ಹಾಕಿಸದಿದ್ದರೆ ವೇತನ ನೀಡುವುದಿಲ್ಲ ಜೊತೆಗೆ ಕೆಲಸದಿಂದ ವಜಾ ಮಾಡಲಾಗುತ್ತೆ ಎಂದು. ಈಗ ಅದೇ ಅಸ್ತ್ರವನ್ನು ಇಂಟೆಲ್‌ ಕೂಡ ಪ್ರಯೋಗಿಸಿದೆ.

ವಿಶ್ವವ್ಯಾಪಿ ಓಮಿಕ್ರಾನ್‌ ಅಬ್ಬರ ಹೆಚ್ಚಾಗುವ ಕಾರಣದಿಂದ ಕಂಪನಿಗಳು ಈ ನಿರ್ಧಾರಕ್ಕೆ ಬರುತ್ತಿವೆ. ಲಸಿಕೆ ಹಾಕಿಸಿಕೊಳ್ಳದೇ ಇರುವ ಉದ್ಯೋಗಿಗಳ ಮೇಲೆ ಕಂಪನಿಗಳು ದಯೆ ತೋರುವಂತೆ ಕಾಣಿಸುತ್ತಿಲ್ಲ. ಇಂಟೆಲ್ ಕಂಪನಿಯೂ ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳದೇ ಹೋದಲ್ಲಿ ವೇತನ ನೀಡದ ರಜೆಯನ್ನು ವಿಧಿಸುವುದಾಗಿ ಎಚ್ಚರಿಸಿದೆ

ಜನವರಿ ೪ರೊಳಗೆ ತನ್ನ ಉದ್ಯೋಗಿಗಳಿಗೆ ಲಸಿಕೆಯ ಪ್ರಮಾಣಪತ್ರವನ್ನು ಸಲ್ಲಿಸಲು ಸೂಚಿಸಿದೆ. ಒಂದು ವೇಳೆ ಪ್ರಮಾಣಪತ್ರ ಸಲ್ಲಿಸದೇ ಹೋದರೆ ವೇತನ ನೀಡದೆ ರಜೆ ನೀಡಲಾಗುವುದು ಎಂದು ಘೋಷಿಸಿದೆ. ಲಸಿಕೆ ಪಡೆಯದ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದರೂ ಸಹ ಪ್ರತೀ ವಾರ ಪರೀಕ್ಷೆಗೆ ಒಳಗಾಗಿ ವರದಿ ಸಲ್ಲಿಸಬೇಕು. 2022ರ ಮಾರ್ಚ್ 15ರ ವರೆಗೆ ಈ ವಿನಾಯಿತಿಯನ್ನು ಪಡೆಯಬಹುದು ಎಂದು ಇಂಟೆಲ್ ಹೆಚ್‌ಆರ್ ಕ್ರಿಸ್ಟಿ ಪಂಬಿಯಾಂಚಿ ತಿಳಿಸಿದ್ದಾರೆ.

 

Share Post