ಅಪ್ರಾಪ್ತನ ಮೇಲೆ ಮೋಹ; ಮದುವೆಯಾಗುವಂತೆ 3 ಮಕ್ಕಳ ತಾಯಿ ಪಟ್ಟು..!
ಮೈಸೂರು: ಅಪ್ರಾಪ್ತ ಬಾಲಕನ ಜೊತೆ ಸ್ಮೇಹ ಬೆಳೆಸಿದ ಮೂರು ಮಕ್ಕಳ ತಾಯಿಯೊಬ್ಬರು ಆತನೊಂದಿಗೆ ಮದುವೆ ಮಾಡಿಕೊಡುವಂತೆ ದುಂಬಾಲು ಬಿದ್ದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ. ಗಂಡನಿಂದ ದೂರವಾಗಿದ್ದ ಮೂರು ಮಕ್ಕಳಿರುವ ಮಹಿಳೆಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ಬಾಲಕನೊಬ್ಬ ಪರಿಚಯವಾಗಿದ್ದ. ಆತನೊಂದಿಗೆ ದಿನವೂ ಚಾಟ್ ಮಾಡುತ್ತಿದ್ದ ಮಹಿಳೆ, ಈಗ ಆತನೊಂದಿಗೆ ಮದುವೆ ಮಾಡುವಂತೆ ಪಟ್ಟು ಹಿಡಿದಿದ್ದಾಳೆ. ಬಾಲಕನ ಮನೆಗೆ ಬಂದು ಮದುವೆ ಮಾಡುವಂತೆ ರಂಪಾಟ ಮಾಡಿದ್ದಾಳೆ.
ಇತ್ತೀಚೆಗೆ ಚಾಲಕ ಮೂರು ದಿನ ಕಾಣಿಸಿರಲಿಲ್ಲ. ಮೂರು ದಿನದ ನಂತರ ಆತ ಮನೆಗೆ ಬಂದಿದ್ದು, ಮೊಬೈಲ್ ಕಳೆದುಕೊಂಡಿದ್ದೆ. ಅದನ್ನು ಹುಡುಕಲು ಹೋಗಿದ್ದೆ ಎಂದು ಸುಳ್ಳು ಹೇಳಿದ್ದರು. ಆದರೆ ವಿವಾಹಿತ ಮಹಿಳೆ ಜೊತೆ ಆತ ಪ್ರವಾಸ ಹೋಗಿದ್ದ ಎಂದು ತಿಳಿದು ಬಂದಿದೆ. ಈ ವಿಚಾರವನ್ನು ಆ ಮಹಿಳೆಯೇ ಬಾಯಿ ಬಿಟ್ಟಿದ್ದು, ಆತನನೊಂದಿಗೆ ದೈಹಿಕ ಸಂಪರ್ಕ ಕೂಡಾ ಹೊಂದಿರುವುದಾಗಿ ಹೇಳಿದ್ದಾಳೆ.
ಆದರೆ ಮಹಿಳೆ ಆಗ್ರಹಕ್ಕೆ ಮಣಿಯದ ಹುಡುಗನ ಪೋಷಕರು, ಗ್ರಾಮದಲ್ಲಿ ಪಂಚಾಯತಿ ಮಾಡಿ, ಮಹಿಳೆಯರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಮಹಿಳೆ ನನಗೆ ಬಾಲಕನೊಂದಿಗೆ ಮದುವೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇದರಿಂದ ಆತಂಕಕ್ಕೊಳಗಾದ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.