CrimeNational

ಅಪ್ರಾಪ್ತ ಬಾಲಕಿಯರ ಪ್ರೇಮ ಪ್ರಕರಣ: ನಡುರಸ್ತೆಯಲ್ಲಿ ರಂಪಾಟ

ವಿಶಾಖಪಟ್ಟಣ: ಈ ಪ್ರೀತಿ ಎಂಥಹ ಕೆಲಸ ಬೇಕಾದ್ರು ಮಾಡೋದಕ್ಕೆ ಹೇಸೋದಿಲ್ಲ, ಸಾಮಾನ್ಯವಾಗಿ ಹುಡುಗಿಗಾಗಿ ಹುಡುಗರು ಹೊಡೆದಾಡುವುದ ಕಾಮನ್, ಆದ್ರೆ ಇಲ್ಲಿ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರು ಅದ್ರಲ್ಲೂ ಮೈನರ್‌ ಆಗಿರುವ ಹೆಣ್ಣು ಮಕ್ಕಳು ಜಟಾಪಟಿ ಹಿಡಿದಿದ್ದಾರೆ.

ವಿಶಾಖಪಟ್ಟಣದಲ್ಲಿ ಒಬ್ಬ ಹುಡುಗನನ್ನು ಕಾಲೇಜು ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಪ್ರೀತಿಸಿದ್ದಾರೆ. ಅವನಿಗಾಗಿ ರಸ್ತೆಗಿಳಿದು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಇದನ್ನು ನೋಡಿದವರು ಕೆಲಕಾಲ ಶಾಕ್‌ಗೆ ಗುರಿಯಾದ್ರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕೌನ್ಸೆಲಿಂಗ್‌ ಕೊಟ್ಟು ಕಳಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಇಬ್ಬರೂ ಹೆಣ್ಣುಮಕ್ಕಳು ಪಿಯುಸಿ ಓದುತ್ತಿದ್ದಾರೆ. ಇಬ್ಬರೂ ಒಬ್ಬನನ್ನೇ ಪ್ರೀತಿಸಿದ್ದಾರೆ. ಈ ವೇಳೆ ಆ ಹುಡುಗ ಬೇರೆ ಯುವತಿಯ ಬಳಿ ಮಾತನಾಡುತ್ತಿರುವದನ್ನು ಕಂಡು ಓರ್ವ ಹುಡುಗಿ ಕೇಳಿದ್ದಾಳೆ. ಇದಕ್ಕೆ ಉತ್ತರಿಸಿದ ಮತ್ತೊಬ್ಬ ಹುಡುಗಿ ನಾವಿಬ್ಬರು ಪ್ರೀತಿಸುತ್ತಿದ್ದೇವೆ ನಮ್ಮಿಬ್ಬರ ಮಧ್ಯೆ ನೀನು ಬರಬೇಡ ಅಂದಿದ್ದೇ ತಡ. ಇಬ್ಬರ ಮಾತು ವಾಗ್ವಾದಕ್ಕೆ ತಿರುಗಿ ರಸ್ತೆ ಮಧ್ಯೆ ಜುಟ್ಟು ಹಿಡಿದು ಎಳೆದಾಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೂವರನ್ನು ಠಾಣೆಗೆ ಕರೆದೊಯ್ದು ಕೌನ್ಸಲಿಂಗ್‌ ಕೊಡಿಸಿ. ವಾಪಸ್‌ ಕಳುಹಿಸಿದ್ದಾರೆ. ಘಟನೆ ಮರುಕಳಿಸದಂತೆ ಮೂವರ ಮನೆಗಳಲ್ಲೂ ವಿಷಯ ತಿಳಿಸಿ ಜಾಗ್ರತೆಯಿಂದ ನೋಡಿಕೊಳ್ಳುವಂತೆ ತಾಕೀತು ಮಾಡಿದ್ದಾರೆ.

Share Post