ಗಡಿ ನಿಯಂತ್ರಣ ರೇಖೆ ಸನಿಹದಲ್ಲೇ ಪಾಕ್‌ನಿಂದ ಬಂಕರ್ ನಿರ್ಮಾಣ..!
ಕುಪ್ವಾರಾ: ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿಯೇ ಪಾಕಿಸ್ತಾನ ಬಂಕರ್‌ಗಳು ಹಾಗೂ ರಸ್ತೆಗಳನ್ನು ನಿರ್ಮಿಸುತ್ತಿದೆ. ಗಡಿ ನಿಯಂತ್ರಿಣ ರೇಖೆಯಿಂದ ಕೇವಲ 300 ಮೀಟರ್ ದೂರದಲ್ಲೇ ಪಾಕಿಸ್ತಾನ ರಸ್ತೆಗಳು ಹಾಗೂ ಬಂಕರ್‌ಗಳನ್ನು ನಿರ್ಮಿಸುತ್ತಿದೆ. ಇದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದೆ.
ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತೀತ್ವಾಲ್ ಬಳಿ ಈ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕೆ ಭಾರತದ ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಸನಿಹದಲ್ಲೇ ಬಂಕರ್ ಹಾಗೂ ರಸ್ತೆಗಳನ್ನು ನಿರ್ಮಿಸುತ್ತಿರುವ ದೃಶ್ಯಾವಳಿ ನ್ಯೂಸ್ ಎಕ್ಸ್ ಕನ್ನಡಕ್ಕೆ ಲಭ್ಯವಾಗಿದೆ.