Health

ಸ್ಥಳೀಯವಾಗಿ ಹರಡುತ್ತಿದೆ ಒಮಿಕ್ರಾನ್‌; ಹೈದರಾಬಾದ್‌ನಲ್ಲಿ ಮೊದಲ ಕೇಸ್‌ ಪತ್ತೆ

ಹೈದರಾಬಾದ್‌: ಮೊದಲ ಬಾರಿಗೆ ಭಾರತದಲ್ಲಿ ಒಮಿಕ್ರಾನ್‌ ಸೋಂಕು ಸ್ಥಳೀಯವಾಗಿ ಹರಡಿದೆ. ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್‌ನ ವೈದ್ಯರೊಬ್ಬರಿಗೆ ಒಮಿಕ್ರಾನ್‌ ಸೋಂಕು ಹರಡಿರುವುದು ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಅನಾರೋಗ್ಯವುಂಟಾಗಿದ್ದು, ಪರೀಕ್ಷೆ ನಡೆಸಿದಾಗ ಅವರಿಗೆ ಒಮಿಕ್ರಾನ್‌ ಸೋಂಕು ಇರುವುದು ದೃಢಪಟ್ಟಿದೆ. ಈ ವೈದ್ಯರು ವಿದೇಶಿ ಪ್ರವಾಸ ಕೈಗೊಂಡಿರಲಿಲ್ಲ. ಇಲ್ಲಿಯೇ ಅವರಿಗೆ ಒಮಿಕ್ರಾನ್‌ ಸೋಂಕು ಹರಡಿದೆ. ಇದುವರೆಗೂ ವಿದೇಶದಿಂದ ಭಾರತಕ್ಕೆ ಬಂದವರಲ್ಲಿ ಒಮಿಕ್ರಾನ್‌ ಸೋಂಕು ಪತ್ತೆಯಾಗಿತ್ತು. ಆದರೆ ಇದೀಗ, ಸೋಂಕು ಇಲ್ಲಿಯೇ ಹರಡಿರುವ ಮೊದಲ ಪ್ರಕರಣ ಹೈದರಾಬಾದ್‌ನಿಂದ ವರದಿಯಾಗಿದೆ.

ಒಮಿಕ್ರಾನ್‌ ಸೋಂಕಿಗೆ ತುತ್ತಾಗಿರುವ ವೈದ್ಯ ಆಂಕಾಲಜಿ ಸ್ಪೆಷಲಿಸ್ಟ್‌ ಆಗಿದ್ದು, ಅವರು ವಿದೇಶಿ ಪ್ರೆಜೆಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಜೊತೆಗೆ ಡಿಸೆಂಬರ್‌ 16 ರಂದು ಹೈದರಾಬಾದ್‌ಗೆ ಆಗಮಿಸಿದ್ದ ವ್ಯಕ್ತಿಯೊಬ್ಬರಿಗೆ ಒಮಿಕ್ರಾನ್‌ ದೃಢಪಟ್ಟಿತ್ತು. ಆ ವ್ಯಕ್ತಿಗೂ ಇವರೇ ಚಿಕಿತ್ಸೆ ನೀಡುತ್ತಿದ್ದರು ಎಂದು ಗೊತ್ತಾಗಿದೆ. ಆತನಿಂದಾಗಿಯೇ ವೈದ್ಯರಿಗೆ ಒಮಿಕ್ರಾನ್‌ ಹರಡಿರಬಹುದು ಎಂದು ಹೇಳಲಾಗಿದೆ. ಇನ್ನು ಒಮಿಕ್ರಾನ್‌ ಸೋಂಕು ತಗಲಿರುವ ವೈದ್ಯರು ನೂರಾರು ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ಅವರ ಜೊತೆ ಕೆಲಸ ಮಾಡುವವರ ಜೊತೆಗೂ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಅವರೆಲ್ಲರಿಗೂ ಒಮಿಕ್ರಾನ್‌ ಭೀತಿ ಉಂಟಾಗಿದೆ. ಎಲ್ಲರನ್ನೂ ಪರೀಕ್ಷಗೊಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post