ಮಂಗಳೂರಲ್ಲಿ MBBS ವಿದ್ಯಾರ್ಥಿನಿ ಆತ್ಮಹತ್ಯೆ
ಉಳ್ಳಾಲ : ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದ MBBS ವಿದ್ಯಾರ್ಥಿನಿ ಭಾನುವಾರ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ.
ಸ್ನೇಹಿತೆಯೊಂದಿಗೆ ಅಪಾರ್ಟ್ಮೆಂಟ್‌ನಲ್ಲಿ ಉಳಿದಿದ್ದ ವೈಶಾಲಿ ಗಾಯಕ್‌ವಾಡ್ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ಪ್ರಾರಂಭಿಸಿರುವ ಪೊಲೀಸರು ವೈಯಕ್ತಿಕ ಕಾರಣಗಳ ಬಗ್ಗೆ ಶಂಕಿಸಿದ್ದಾರೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಬೀದರ್‌ನ ಆನಂದ ನಗರದ ವಿಜಯಕುಮಾರ್ ಗಾಯಕ್ವಾಡ್ ಪುತ್ರಿ ವೈಶಾಲಿ ಗಾಯಕ್ವಾಡ್ ಅವರಿಗೆ ೨೫ ವರ್ಷ ವಯಸ್ಸಾಗಿತ್ತು.