National

ಒಡಿಶಾದ ಉದ್ದನೆಯ ಸೇತುವೆ ಉದ್ಘಾಟನೆ ಮಾಡಿದ ಸಿಎಂ ಪಟ್ನಾಯಕ್‌

ಭುವನೇಶ್ವರ : ಕಟಕ್‌ ಜಿಲ್ಲೆಯ ಗೋಪಿನಾಥಪುರದಲ್ಲಿ ಮಹಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಅತಿ ಉದ್ದದ ಸೇತುವೆಯನ್ನು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಸೋಮವಾರ ಉದ್ಘಾಟಿಸಿದರು.

ಸಿಂಗನಾಥ್‌ ಪೀಠದಿಂದ ಬೈದೇಶ್ವರ್‌ಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯು 3.4 ಕಿಮೀ ಉದ್ದವಿದೆ. ಈ ಸೇತುವೆಯ ನಿರ್ಮಾಣದಿಂದ ಸುಮಾರು ೪೦ಕಿಮೀ ಅಂತರ ಕಡಿತಗೊಂಡಿದೆ. ಸೇತುವೆಯನ್ನು T ಆಕಾರದಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ತಗುಲಿರುವ ವೆಚ್ಚ ೧೧೧ ಕೋಟಿ.

2014ರ ಫೆಬ್ರುವರಿಯಲ್ಲಿ ಪಟ್ನಾಯಕ್‌ ಈ ಕೆಲಸಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

Share Post