Cinema

ನಾನು ಅಶ್ಲೀಲ ಸಿನಿಮಾ ಮಾಡಿಲ್ಲ- ಮೌನ ಮುರಿದ ರಾಜ್‌ ಕುಂದ್ರ

ಮುಂಬೈ : ಅಶ್ಲೀಲ ಸಿನಿಮಾಗಳನ್ನು ನಿರ್ಮಾಣ ಮಾಡಿ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪದಡಿ ರಾಜ್‌ ಕುಂದ್ರಾ ಅವರು ೨ ತಿಂಗಳ ಕಾಲ ಜೈಲಿನಲ್ಲಿದ್ದರು. ಜಾಮೀನಿನ ಮೇಲೆ ಹೊರ ಬಂದ ರಾಜ್‌ ಕುಂದ್ರ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರಲಿಲ್ಲ.

ರಾಜ್‌ ಕುಂದ್ರ ಅವರ ಮೇಲಿರುವ ಅನೇಕ ಆರೋಪಗಳಿಗೆ ಈಗ ಪ್ರತಿಕ್ರಿಯೆ ನೀಡಿದ್ದಾರೆ.

“ನನ್ನ ವಿರುದ್ಧ ಷಡ್ಯಂತರ ನಡೆಸಿದ್ದಾರೆ. ನಾನು ಯಾವುದೇ ಅಶ್ಲೀಲ ಸಿನಿಮಾ ನಿರ್ಮಾಣವಾಗಲಿ ಅಥವ ವಿತರಣೆಯಾಗಲಿ ಮಾಡಿಲ್ಲ. ನನ್ನ ಕುರಿತು ಅನೇಕ ಆಧಾರವಿಲ್ಲದ ಮಾಹಿತಿಗಳು ಹರಿದಾಡ್ತಿದೆ. ಈ ಪ್ರಕರಣ ಈಗ ವಿಚಾರಣೆಯ ಹಂತದಲ್ಲಿದೆ. ಹಾಗಾಗಿ ನಾನು ಸ್ಪಷ್ಟನೆಗಳನ್ನು ನೀಡಲಾಗುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅದರಲ್ಲಿ ಸತ್ಯ ಗೆಲ್ಲುತ್ತದೆ. ನಾನು ವಿಚಾರಣೆ ಎದುರಿಸಲು ಸಿದ್ಧನಿದ್ದೇನೆ’ ಎಂದು ರಾಜ್‌ ಕುಂದ್ರ ಹೇಳಿದ್ದಾರೆ.

ವಿಚಾರಣೆ ಮುಗಿಯುವ ಮುನ್ನವೇ ನನ್ನನ್ನು ತಪ್ಪಿತಸ್ಥನಂತೆ ಬಿಂಬಿಸಿದ್ದಾರೆ. ಇದರಿಂದ ನನ್ನ ಕುಟುಂಬಕ್ಕೆ ತೀವ್ರ ಬೇಸರವಾಗಿದೆ. ನಾನು ಮುಖ ಮುಚ್ಚಿಕೊಂಡು ಓಡಾಡ್ತಿಲ್ಲ. ನನ್ನ ಕುಟುಂಬ ಅಷ್ಟೇ ನನಗೆ ಮುಖ್ಯ” ಎಂದು ಹೇಳಿದ್ದಾರೆ.

Share Post