Lifestyle

ಹಲ್ಲು ನೋವು ಕಾಡುತ್ತಿದೆಯೇ, ಇಲ್ಲಿದೆ ಕೆಲ ಟಿಪ್ಸ್‌ಗಳು

ಹಲ್ಲುನೋವು ಬಂದರೆ ಸಾಕು ತಡೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಅದಕ್ಕೆ ಏನು ಮಾಡಬೇಕು ಎಂಬುದು ಅರ್ಥವಾಗುವುದಿಲ್ಲ. ಹಲ್ಲುನೋವಿನಿಂದ ತಲೆನೋವು ಬರುತ್ತದೆ. ಹೀಗೆ ಒಂದೆಲ್ಲ ಒಂದು ಸಮಸ್ಯೆ ಉಂಟಾಗುತ್ತದೆ. ಕೆಲವರು ನೋವು ಕೊಡುವ ಹಲ್ಲುಗಳನ್ನು ತೆಗೆಸಿ ಬಿಡುತ್ತಾರೆ. ಆದರೆ ಈ ಹಲ್ಲು ನೋವಿಗೆ ಮನೆಯಲ್ಲಿ ಪರಿಹಾರವಿದೆ. ಕೆಲವು ವಸ್ತುಗಳನ್ನು ಬಳಸುವುದರಿಂದ ನೋವು ಕಡಿಮೆಯಾಗುತ್ತದೆ. ಈ ಹಲ್ಲುನೋವಿನ ಪರಿಹಾರ ಇಲ್ಲಿದೆ ಕೆಲ ಮನೆಮದ್ದುಗಳು.
ಬೆಳ್ಳುಳ್ಳಿ: ಅಲಿಸಿನ್ ಎಂಬ ಅಂಶವಿದ್ದು ಇದು ಆಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿರುವುದರಿಂದ ಹಲ್ಲು ನೋವಿಗೆ ಪರಿಹಾರ ನೀಡುತ್ತದೆ. ನೀವು ಬೆಳ್ಳುಳ್ಳಿಯನ್ನು ಜಜ್ಜಿ ಉಪ್ಪನ್ನ ಸೇರಿಸಿ ಹಲ್ಲು ನೋವಿರುವ ಕಡೆ ಹಚ್ಚುವುದು ಬೇಗ ಪರಿಹಾರ ನೀಡುತ್ತದೆ.
ಪೇರಲೆ ಎಲೆ:ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶವಿದೆ. ಹೀಗಾಗಿ ಇದರ ಎಲೆಯನ್ನು ಅಗೆಯುವದರಿಂದ ಹಲ್ಲು ನೋವು ಶಮನವಾಗುತ್ತದೆ.
ಲವಂಗ ಎಣ್ಣೆ: ಆ್ಯಂಟಿ ಇನ್ಫಾಮೇಟರಿ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುವ ಲವಂಗ ಎಣ್ಣೆ ನಿಮ್ಮ ಹಲ್ಲು ನೋವಿಗೆ ಉತ್ತಮ ಪರಿಹಾರ ಎನ್ನಲಾಗುತ್ತದೆ. ಲವಂಗ ಎಣ್ಣೆಯನ್ನು ತೆಗೆದುಕೊಂಡು ಹತ್ತಿಯಲ್ಲಿ ಅದ್ದಿ ನೋವಿರುವ ಸ್ಥಳದಲ್ಲಿ ನಿಧಾನವಾಗಿ ಹಚ್ಚಬೇಕು. ಇದನ್ನ ನಿಯಮಿತವಾಗಿ ಬಳಕೆ ಮಾಡುವುದರಿಂದ ನೋವಿಗೆ ಪರಿಹಾರ ದೊರೆಯುತ್ತದೆ.
ಟೀ ಬ್ಯಾಗ್‌ : ಚಹಾದಲ್ಲಿ ಟ್ಯಾನಿನ್ ಎಂಬ ಅಂಶವಿದ್ದು, ಇದು ನಿಮ್ಮ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ನೀವು ಹಲ್ಲು ನೋವು ಬಂದಾಗ ಟೀ ಬ್ಯಾಗ್ ಕಚ್ಚುವುದರಿಂದ ಬೇಗನೆ ನೋವು ಪರಿಹಾರವಾಗುತ್ತದೆ ಎನ್ನುತ್ತಾರೆ.
ಪುದೀನಾ: ಇದರಲ್ಲಿ ಮೆಂಥಾಲ್‌ ಇದ್ದು, ನೋವು ಇರುವ ಜಾಗಕ್ಕೆ ಪುದೀನಾ ಎಣ್ಣೆ ಹಚ್ಚಿಕೊಳ್ಳವುದರಿಂದು ನೋವು ನಿವಾರಣೆಯಾಗುತ್ತದೆ.

 

Share Post