ಮೇಲ್ಮನವಿ ಸಲಿಸಿದ ಸಿದ್ದರಾಮಯ್ಯ; ಏನೆಲ್ಲಾ ಅಂಶಗಳಿವೆ..?
ಬೆಂಗಳೂರು; ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ರದ್ದು ಮಾಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.. ಈ ಅರ್ಜಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.. ಕೋರ್ಟ್ ಇದನ್ನು ಪುರಸ್ಕರಿಸಿದರೆ ಸಿದ್ದರಾಮಯ್ಯ ಅವರು ಕಾನೂನು ಸಂಕಷ್ಟದಿಂದ ಪಾರಾಗಬಹುದು.. ಆದ್ರೆ ವಿಭಾಗೀಯ ಪೀಠ ಯಾವ ಆದೇಶ ಕೊಡುತ್ತೆ ಅನ್ನೋದೇ ಕುತೂಹಲ..
ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರು.. ಟಿ.ಜೆ.ಅಬ್ರಹಾಂ ಸೇರಿ ಮೂವರು ಖಾಸಗಿ ವ್ಯಕ್ತಿಗಳ ಮಾಡಿದ ಮನವಿಗೆ ರಾಜ್ಯಪಾಲರು ಸ್ಪಂದಿಸಿದ್ದರು.. ಇದನ್ನು ಪ್ರಶ್ನೆ ಮಾಡಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.. ಆದ್ರೆ ಏಕಸದಸ್ಯ ಪೀಠ ಸಿದ್ದರಾಮಯ್ಯ ಅವರ ವಾದಕ್ಕೆ ಮನ್ನಣೆ ಕೊಟ್ಟಿರಲಿಲ್ಲ.. ಹೀಗಾಗಿ ಜನಪ್ರತಿನಿಧಿಗಳ ಕೋರ್ಟ್ ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದೆ.. ಆದ್ರೆ, ಈ ಅದೇಶಕ್ಕೆ ತಡೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ಈಗ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮನವಿ ಸಲ್ಲಿಸಿದ್ದಾರೆ..
ಸರ್ಕಾರಕ್ಕೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದರು.. ಆದ್ರೆ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ನಿರ್ಣಯ ಮಾಡಲಾಗಿತ್ತು.. ಆದ್ರೆ ರಾಜ್ಯಪಾಲರು ಸಂಪುಟದ ಸಲಹೆ ಪಾಲಿಸದೇ ಲೋಪವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.. 17ಎ ಅಡಿಯಲ್ಲಿ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳು ರಾಜ್ಯಪಾಲರ ಅನುಮತಿ ಕೇಳಬೇಕು. ಆದರೆ ಖಾಸಗಿ ವ್ಯಕ್ತಿಯ ದೂರು ಪರಿಗಣಿಸಿ ಅನುಮತಿ ನೀಡಲಾಗಿದ್ದು, ರಾಜ್ಯಪಾಲರು ಇದರಲ್ಲಿ ವಿವೇಚನೆ ಬಳಸಿಲ್ಲ. ಈ ಅಂಶಗಳನ್ನು ಹೈಕೋರ್ಟ್ ಏಕಸದಸ್ಯ ಪೀಠ ಪರಿಗಣಿಸಿಲ್ಲ ಎಂದು ಹೊಸ ಅರ್ಜಿಯಲ್ಲಿ ಹೇಳಲಾಗಿದೆ..