ಪಾಸ್ ಕೇಳಿದ್ದಕ್ಕೆ ಕಂಡಕ್ಟರ್ ಕೊಲೆಗೆ ಯತ್ನಿಸಿದ ಕಂಡಕ್ಟರ್!
ಬೆಂಗಳೂರು; ಇತ್ತೀಚೆಗೆ ಯುವಕನೊಬ್ಬ ಬಿಎಂಟಿಸಿ ಕಂಡಕ್ಟರ್ ಮೇಲೆ ದಾಳಿ ನಡೆಸಿದ್ದ.. ಚಾಕುವಿನಿಂದ ತಿವಿದಿದ್ದ.. ಇದೀಗ ಇಂತಹದ್ದೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ಬಿಎಂಟಿಸಿ ನಿರ್ವಾಹಕನ ಕೊಲೆ ಯತ್ನ ನಡೆದಿದೆ.. ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ..
ಅಕ್ಟೋಬರ್ 18ರಂದು ಟಿನ್ ಫ್ಯಾಕ್ಟರಿ ಬಳಿ ಪಾಸ್ ತೋರಿಸುವ ವಿಚಾರಕ್ಕೆ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ಜಗಳವಾಗಿದೆ.. ಕಂಡಕ್ಟರ್ ಜೊತೆ ಕಿರಿಕ್ ತೆಗೆದ ಪ್ರಯಾಣಿಕ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದಾನೆ.. ಕಂಡಕ್ಟರ್ ಸಂಗಪ್ಪ ಎಂಬುವವರ ಮೇಲೆ ಈ ದಾಳಿ ನಡೆದಿದೆ.. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ..