ಸಮಾಧಿಯಿಂದ ಬಾಲಕಿಯ ಶವ ಹೊರತೆಗೆದು ಸಾಮೂಹಿಕ ಅತ್ಯಾಚಾರ!
ನವದೆಹಲಿ; ಎಂತೆಂಥಾ ಜನ ಇರ್ತಾರೆ ಅನ್ನೋದಕ್ಕೆ ಈ ಸುದ್ದಿಯೇ ಸಾಕ್ಷಿ.. ಇದೊಂದು ಪೈಶಾಚಿಕ ಕೃತ್ಯ ಅಂದ್ರೆ ತಪ್ಪೇ ಆಗೋದಿಲ್ಲ.. ಯಾಕಂದ್ರೆ ಇಬ್ಬರು ಯುವಕರು ಪಿಶಾಚಿಗಳಂತೆ ವರ್ತನೆ ಮಾಡಿದ್ದಾರೆ.. ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಆಕೆಯ ಶವ ಸಂಸ್ಕಾರ ಮಾಡಲಾಗಿತ್ತು.. ರಾತ್ರಿ ವೇಳೆ ಅಲ್ಲಿಗೆ ಹೋಗಿರುವ ಇಬ್ಬರು ಯುವಕರು ಬಾಲಕಿಯ ಮೃತದೇಹವನ್ನು ಹೊರತೆಗೆದು, ಅದರ ಮೇಲೆ ಅತ್ಯಾಚಾರ ಎಸಗಿದ್ದಾರೆ..
ಜಾರ್ಖಂಡ್ನ ಧನ್ಬಾದ್ ಎಂಬಲ್ಲಿ ಈ ಕೃತ್ಯ ಎಸಗಲಾಗಿದೆ.. ಶವದ ಮೇಲೆ ಅತ್ಯಾಚಾರ ಮಾಡಿದ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.. ಆರೋಪಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹ ಮಾಡುತ್ತಿದ್ದಾರೆ..