ನಾಡಗೀತೆ ಘೋಷಿಸಿದ ತಮಿಳು ಸರ್ಕಾರ
ಚೆನೈ : ತಮಿಳುನಾಡಿನ ನಾಡಗೀತೆಯನ್ನು ಘೋಷಿಸಿದ ಸ್ಟಾಲಿನ್ ಸರ್ಕಾರ. ತಮಿಳುನಾಡು ಮತ್ತು ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿಯುವ ʼತಮಿಳ್ ತಾಯ್ ವಜತುʼ ಸ್ವಾಗತ ಗೀತೆಯನ್ನು ತಮಿಳು ನಾಡು ಸರ್ಕಾರ ನಾಡಗೀತೆಯನ್ನಾಗಿ ಘೋಷಿಸಿದೆ.
ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ, ʼತಮಿಳ್ ತಾಯ್ ವಜತುʼ ಕೇವಲ ಪ್ರಾರ್ಥನಾ ಗೀತೆ, ಇದಕ್ಕೆ ಎಲ್ಲರೂ ಎದ್ದು ನಿಲ್ಲುವ ಅವಶ್ಯಕತೆ ಇಲ್ಲ ಎಂದು ಹೇಳಿತ್ತು. ಇದರ ಹಿಂದೆಯೇ ರಾಜ್ಯ ಸರ್ಕಾರ ಉಲ್ಲೇಖಿತ ಗೀತೆಗೆ ನಾಡಗೀತೆಯ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ.
ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯಗಳಲ್ಲಿ ಕಾರ್ಯಕ್ರಮ ಶುರುಮಾಡುವ ಮುನ್ನ ಈ ಗೀತೆ ಹಾಡುವುದು ಕಡ್ಡಾಯ ಎಂದು ಸಿಎಂ ಸ್ಟಾಲಿನ್ ಸ್ಪಷ್ಟ ಪಡಿಸಿದ್ದಾರೆ.