National

ಮಡುಗಟ್ಟಿದ ಮರಳು ರಾಜ್ಯ: ಜನ ಹೈರಾಣ

ರಾಜಸ್ಥಾನ: ಮರಳು ರಾಜ್ಯದಲ್ಲಿ ಚಳಿ ತಾಂಡವವಾಡುತ್ತಿದೆ. ಡಿಸೆಂಬರ್‌ನ ಅರ್ಧ ತಿಂಗಳಿನಲ್ಲೇ ತಾಪಮಾನ ಗಂಭೀರ ಇಳಿಕೆಯಗಿದೆ. ಶೀತಗಾಳಿಯ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಪಿಲಾನಿಯಲ್ಲಿ 1.1 ಡಿಗ್ರಿ, ಫತೇಪುರದಲ್ಲಿ 1.6 ಡಿಗ್ರಿ, ಚುರುವಿನಲ್ಲಿ 2 ಡಿಗ್ರಿ, ನಾಗೌರ್‌ನಲ್ಲಿ 3.3 ಡಿಗ್ರಿ, ಸಿಕರ್‌ನಲ್ಲಿ 5 ಡಿಗ್ರಿ, ಬಿಕನೇರ್ 5.6 ಡಿಗ್ರಿ, ಹನುಮಾನ್‌ಗಡ 6 ಡಿಗ್ರಿ, ಗಂಗಾನಗರ 6.6, ಫಲೋಡಿಯಲ್ಲಿ 8.7, ಜೈಸಲ್ಮೇರ್ 7.3, ಜಲೋರ್ 8.1 ಮತ್ತು ಅಲ್ವಾರ್‌ನಲ್ಲಿ 8.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಶೀತ ವಾತಾವರಣ ಡಿಸೆಂಬರ್‌ 20ರವರೆಗೆ ಮುಂದುವರೆಯಲಿದೆ. ತದನಂತರ ತಾಪಮಾನ ಇನ್ನಷ್ಟು ಇಳಿಕೆಯಾಗಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದೆ.

Share Post