CinemaCrime

ಸಲ್ಮಾನ್‌ ಖಾನ್‌ ಹತ್ಯೆಗೆ 60 ಶೂಟರ್‌ಗಳನ್ನು ನೇಮಿಸಿದ್ದ ಬಿಷ್ಣೋಯ್‌!

ಮುಂಬೈ; ಇತ್ತೀಚೆಗಷ್ಟೇ ಮುಂಬೈನಲ್ಲಿ ರಾಜಕಾರಣಿ ಬಾಬಾ ಸಿದ್ದಿಕಿ ಹತ್ಯೆಯಾಗಿತ್ತು.. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ನಾವೇ ಈ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದೆ.. ಇನ್ನೊಂದೆಡೆ ಇದೇ ಗ್ಯಾಂಗ್‌ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಕೊಲೆಗೂ ಸ್ಕೆಚ್‌ ರೂಪಿಸಿದೆ.. ಈಗಾಗಲೇ ಹಲವು ಬಾರಿ ಸಲ್ಮಾನ್‌ ಕೊಲೆಗೆ ಪ್ರಯತ್ನ ಮಾಡಲಾಗಿದೆ.. ಮಾಹಿತಿ ಪ್ರಕಾರ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೊಯ್‌ ಸಲ್ಮಾನ್‌ ಖಾನ್‌ ಕೊಲೆಗೆ 60 ಶೂಟರ್‌ಗಳನ್ನು ನೇಮಿಸಿದ್ದ ಎಂದು ತಿಳಿದುಬಂದಿದೆ..
ಸಲ್ಮಾನ್‌ ಖಾನ್‌ಗೆ ಅನೇಕ ಬೆದರಿಕೆಗಳು ಬರುತ್ತಿದ್ದವು.. ಇತ್ತೀಚೆಗೆ ಅವರ ಮನೆ ಮುಂದೆಯೇ ಗುಂಡಿನ ದಾಳಿ ನಡೆದಿತ್ತು.. ಸಲ್ಮಾನ್‌ ಖಾನ್‌ ಕೃಷ್ಣ ಮೃಗ ಬೇಟೆಯಾಡಿದ್ದರು.. ಬಿಷ್ಣೊಯ್‌ ಸಮುದಾಯದವರು ಕೃಷ್ಣಮೃಗವನ್ನು ದೇವರೆಂದು ಪೂಜಿಸುತ್ತಾರೆ.. ಈ ಕಾರಣಕ್ಕಾಗಿ ಲಾರೆನ್ಸ್‌ ಬಿಷ್ಣೋಯ್‌ ಸಲ್ಮಾನ್‌ ಖಾನ್‌ ಹತ್ಯೆಗೆ ಸ್ಕೆಚ್‌ ಹಾಕಿದ್ದಾನೆ ಎಂದು ಹೇಳಲಾಗುತ್ತದೆ..

Share Post