ʻದೆಹಲಿ ಕಳ್ಳರಿಗೆ ಮುಡಾ ಪ್ರಕರಣ ಸ್ಪೂರ್ತಿಯಾಯಿತಂತೆ!ʼ; ಹೀಗಂದಿದ್ದು ಯಾರು..?
ಬೆಂಗಳೂರು; ದೆಹಲಿಯಲ್ಲಿ ಕಾರೊಂದನ್ನು ಕದ್ದಿದ್ದ ಕಳ್ಳನೊಬ್ಬ ದಾರಿ ಮಧ್ಯೆ ಅದನ್ನು ನಿಲ್ಲಿಸಿ ಅದರ ಮೇಲೆ ಕ್ಷಮಾಪಣಾ ಪತ್ರ ಅಂಟಿಸಿದ್ದ.. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ವೈರಲ್ ಆಗಿತ್ತು.. ಇದೀಗ ಇದೇ ಸುದ್ದಿಯನ್ನು ಸಿದ್ದರಾಮಯ್ಯ ಅವರ ಮುಡಾ ಕೇಸ್‌ಗೆ ಲಿಂಕ್ ಮಾಡಿ ಲೇವಡಿ ಮಅಡಲಾಗುತ್ತಿದೆ.. ರಾಜ್ಯ ಬಿಜೆಪಿ ಈ ಪ್ರಕರಣದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿದ್ದು, ಕಾಂಗ್ರೆಸ್ ನಾಯಕರ ಕಾಲೆಳೆದಿದೆ..
ಪರೋಕ್ಷವಾಗಿ ದೆಹಲಿಯಲ್ಲಿ ಕಾರು ಕದ್ದು ವಾಪಸ್ ಕೊಟ್ಟ ಪ್ರಕರಣಕ್ಕೆ ಸಿದ್ದರಾಮಯ್ಯ ಅವರ ಮುಡಾ ಕೇಸ್ ಸ್ಪೂರ್ತಿಯಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮುಡಾದಿಂದ ಪಡೆದ ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದರು.. ಇತ್ತ ಖರ್ಗೆ ಕುಟುಂಬದ ಟ್ರಸ್ಟ್ ಕೂಡಾ ಸರ್ಕಾರದಿಂದ ಪಡೆದ ಭೂಮಿಯನ್ನು ವಾಪಸ್ ನೀಡಿದೆ.. ಇದನ್ನೇ ಕಾರು ಕಳ್ಳ ಸ್ಪೂರ್ತಿಯಾಗಿ ಪಡೆದು ಕಾರು ವಾಪಸ್ ಕೊಟ್ಟಿದ್ದಾನೆ.. ಕ್ಷಮಾಪಣೆ ಪತ್ರ ಅಂಟಿಸಿದ್ದಾನೆ ಎಂದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಟ್ವೀಟ್ ಮಾಡಿದೆ..
“ಕಾಂಗ್ರೆಸ್ ಮಾದರಿ”ಯನ್ನು ಕಾರು ಕಳ್ಳ ಪ್ರಾಮಾಣಿಕವಾಗಿ ಅನುಸರಿಸಿದ್ದಾರೆ. ಹೀಗಾಗಿ ಆ ಕಳ್ಳನಿಗೆ “ಪ್ರಾಮಾಣಿಕ ಕಳ್ಳ” ಎಂಬ ರಾಜ್ಯ ಪ್ರಶಸ್ತಿ ಘೋಷಿಸಿದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.