BengaluruCrime

ಯುವತಿಯರ ಜೊತೆ ಬಳೆ ಅಂಗಡಿ ವ್ಯಾಪಾರಿ ಅಸಭ್ಯ ವರ್ತನೆ!

ಬೆಂಗಳೂರು; ಬಳೆ ಅಂಗಡಿಗೆ ಬರುವ ಯುವತಿಯರ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ವ್ಯಾಪಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.. ಬೆಂಗಳೂರಿನ ವೈಟ್‌ಫೀಲ್ಡ್‌ ಬಳಿಯ ಕಾಡುಗೋಡಿಯಲ್ಲಿ ಈ ಘಟನೆ ನಡೆದಿದೆ..
ಫ್ಯಾನ್ಸಿ ಸ್ಟೋರ್‌ ಇಟ್ಟುಕೊಂಡಿರುವವ ಆರೋಪಿ ಬೇರೆ ರಾಜ್ಯದವನಾಗಿದ್ದು, ತನ್ನ ಅಂಗಡಿಗೆ ಬರುವ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಎನ್ನಲಾಗಿದೆ.. ಹೆಣ್ಣು ಮಕ್ಕಳಿಗೆ ಗುಪ್ತಾಂಗ ತೋರಿಸಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ.. ಈ ಬಗ್ಗೆ ಯುವತಿಯರು ಸ್ಥಳೀಯರಿಗೆ ತಿಳಿಸಿದ್ದು, ಸ್ಥಳೀಯರು ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..
ನಂತರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.. ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ..

Share Post