CrimeDistrictsPolitics

ಮಾಜಿ ಶಾಸಕನ ಸಹೋದರ ನಾಪತ್ತೆ!; ಕೂಳೂರು ಬ್ರಿಡ್ಜ್‌ ಬಳಿ ಕಾರು ಪತ್ತೆ!

ಮಂಗಳೂರು; ಮಂಗಳೂರಿನ ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ಅವರ ಸಹೋದರ ಮುಮ್ತಾಜ್‌ ಅಲಿ ನಾಪತ್ತೆಯಾಗಿದ್ದಾರೆ.. ಮನೆಯವರ ಜೊತೆ ಕೋಪ ಮಾಡಿಕೊಂಡು ಅವರು ಸಾಯುತ್ತೇನೆ ಎಂದು ಮನೆಯಿಂದ ತೆರಳಿದ್ದರು ಎನ್ನಲಾಗಿದೆ.. ಇದೀಗ ಅವರ ಕಾರು ಮಂಗಳೂರು ನಗರದ ಕೂಳೂರು ಬ್ರಿಡ್ಜ್‌ ಮೇಲೆ ಪತ್ತೆಯಾಗಿದೆ.. ಕಾರಿಗೆ ಸಾಕಷ್ಟು ಡ್ಯಾಮೇಜ್‌ ಆಗಿದೆ.. ಆದ್ರೆ ಮುಮ್ತಾಜ್‌ ಅಲಿ ಮಾತ್ರ ಪತ್ತೆಯಾಗಿಲ್ಲ..
ಕೆಎ19 ಎಂಜಿ0004 ಸಂಖ್ಯೆಯ BMW X5 ಕಾರು ಇದಾಗಿದೆ.. ಸ್ಥಳಕ್ಕೆ ಕುಟುಂಬಸ್ಥರು, ಎಸ್​ಡಿಆರ್​ಎಫ್​, ಎನ್​ಡಿಆರ್​​ಎಫ್ ಹಾಗೂ​ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ.. ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ.. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮುಮ್ತಾಜ್‌ ಅಲಿ ಅವರು ಮನೆಯಿಂದ ತೆರಳಿದ್ದಾರೆ.. ಬೆಳಗಿನಜಾವ 5 ಗಂಟೆ ಸುಮಾರಿಗೆ ಸೇತುವೆ ಮೇಲೆ ಕಾರು ಪತ್ತೆಯಾಗಿದೆ.. ಮಸೀದಿ ಕಮಿಟಿಗಳಲ್ಲಿ ಸಕ್ರಿಯರಾಗಿದ್ದ ಅವರು ಹಲವು ಉದ್ಯಮಗಳನ್ನೂ ನಡೆಸುತ್ತಿದ್ದರು..
ಈಜು ತಜ್ಞ ಈಶ್ವರ್‌ ಮಲ್ಪೆ ಕೂಡಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.. ಬ್ರಿಡ್ಜ್‌ ಕೆಳಗೆ 100 ಮೀಟರ್‌ ಸುತ್ತಮುತ್ತ ಸ್ಕೂಬಾ ಡೈವ್‌ ಮೂಲಕ ಹುಡುಕಾಟ ಮಾಡುತ್ತೇವೆ.. ಸಮುದ್ರಕ್ಕೆ ನದಿ ನೀರು ಸೇರುವ ಮುನ್ನ ಕಾರ್ಯಾಚರಣೆ ಮುಗಿಸಬೇಕು. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಈಶ್ವರ್‌ ಮಲ್ಪೆ ಹೇಳಿದ್ದಾರೆ..

Share Post