ಬಾರ್ಲಿ; ಇದು ಬಡವರ ಆರೋಗ್ಯ ಸಂಜೀವಿನಿ..
ಬೆಂಗಳೂರು; ಮನುಷ್ಯನ ಲೈಫ್ ಬ್ಯುಸಿಯಾಗಿಬಿಟ್ಟಿದೆ.. ಹಣವಿದ್ದರೆ ಎಲ್ಲವೂ ಇರುತ್ತೆ ಎಂದು ಮನುಷ್ಯ ನಂಬಿಬಿಟ್ಟಿದ್ದಾನೆ.. ಇದರಿಂದಾಗಿ ಆರೋಗ್ಯ ಮೇಲೂ ಕಾಳಜಿ ತೋರಿಸುತ್ತಿಲ್ಲ.. ಆದ್ರೆ ಸಂಪಾದನೆ ಅಂದ್ರೆ ಹಣ ಒಂದೇ ಅಲ್ಲ.. ಆರೋಗ್ಯ ಸಂಪಾದನೆ ಕೂಡಾ ಮುಖ್ಯವಾಗುತ್ತದೆ.. ಹಾಗಾದರೆ ಆರೋಗ್ಯ ಕಾಪಾಡಿಕೊಳ್ಳಲು ಬಡವರ ಸಂಜೀವಿನಿಯೊಂದನ್ನು ನಾವು ನಿಮಗೆ ಇಲ್ಲಿ ಪರಿಚಯ ಮಾಡಿಸುತ್ತಿದ್ದೇವೆ.. ಇದರ ಸೇವನೆಯಿಂದ ದೇಹದಲ್ಲಿ ಕಲ್ಮಶಗಳೆಲ್ಲಾ ಹೊರಹಾಕಲ್ಪಡುತ್ತವೆ..
ದೇಹದಲ್ಲಿನ ವಿಷ, ಕಲ್ಮಶಗಳನ್ನು ಹೊರಹಾಕಿ;
ಮನುಷ್ಯ ಒತ್ತಡದಲ್ಲಿ ಬದಕುತ್ತಾನೆ.. ಇದರಿಂದಾಗಿ ಆತ ತನ್ನ ಆರೋಗ್ಯವನ್ನೂ ಮರೆತಿದ್ದಾನೆ.. ಬ್ಯುಸಿ ಲೈಫ್‌ನಲ್ಲಿ ಅನಾರೋಗ್ಯಕರ ಆಹಾರಗಳನ್ನೆಲ್ಲಾ ಮನುಷ್ಯ ಸೇವಿಸುತ್ತಿದ್ದಾರೆ.. ಹೀಗಾಗಿ ದೇಹದಲ್ಲಿ ಮಲಿನಗಳು ಹೆಚ್ಚಾಗಿ ಸಂಗ್ರಹವಾಗುತ್ತಿವೆ.. ಇದರಿಂದ ಹಲವಾರು ಕಾಯಿಲೆಗಳು ಬರುತ್ತಿವೆ.. ಹೀಗಾಗಿ, ದೇಹದಲ್ಲಿನ ಮಲಿನಗಳನ್ನು ತೆಗೆದುಹಾಕುವ ಕೆಲಸ ಮಾಡಬೇಕಾಗುತ್ತದೆ.. ಹಾಗೆ ದೇಹದಲ್ಲಿನ ವಿಷ ಡಿಟಾಕ್ಸ್ ಮಾಡೋದಕ್ಕೆ ನಮಗೆ ಬೇಕಾಗಿರೋದು ಬಾರ್ಲಿ ನೀರು.. ಬಾರ್ಲಿಯಿಂದ ಮಾಡಿದ ನೀರು ಆರೋಗ್ಯ ವರ್ಧಕ.. ನಮ್ಮ ದೇಹದಲ್ಲಿ ಮಲಿನಗಳನ್ನೆಲ್ಲಾ ತೆಗೆದುಹಾಕುತ್ತದೆ.. ಇದು ಅತ್ಯಂತ ಆರೋಗ್ಯಕರವಾಗಿದ್ದು, ದೇಹದ ಉಷ್ಣವನ್ನು ತೆಗೆದುಹಾಕುವ ತಾಕತ್ತು ಅದಕ್ಕಿದೆ..
ಬಾರ್ಲಿ ನೀರು ತಯಾರಿಸುವುದು ಹೇಗೆ..?;
ಭಾರತದಲ್ಲಿ ಬಾರ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ.. ಅದರಲ್ಲೂ ಸಿರಿಧಾನ್ಯಗಳ ಬಳಕೆ ಹೆಚ್ಚಾದ ಮೇಲೆ ಬಾರ್ಲಿಯನ್ನು ಸೇವಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.. ಅಂದಹಾಗೆ ಬಾರ್ಲಿ ನೀರನ್ನು ಹೇಗೆ ತಯಾರಿಸಬೇಕು ನೋಡೋಣ.. ಅದನ್ನು ಯಾವಾಗ ಕುಡಿಯಬೇಕು ಎಂಬುದನ್ನು ನಾವು ಇಲ್ಲಿ ತಿಳಿಯೋಣ.. ಈ ಬಾರ್ಲಿ ಧಾನ್ಯವನ್ನು ಉಪಯೋಗಿಸಿಕೊಂಡು, ಡಿಟಾಕ್ಸ್ ನೀರನ್ನು ತಯಾರಿಸುವ ವಿಧಾನವು ಸಾಕಷ್ಟು ಆಧುನಿಕವಾಗಿದೆ. ಆದರೆ ಇದು ತುಂಬಾನೇ ಉಪಯುಕ್ತವಾಗಿದೆ. ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಬಾರ್ಲಿಯನ್ನು ನೆನೆಸಿಡಬೇಕು. ರಾತ್ರಿಯಿಡೀ ಈ ಬಾರ್ಲಿ ನೀರಿನಲ್ಲಿ ನೆನೆಯಬೇಕು.. ಬೆಳಗ್ಗೆ ಆ ನೀರನ್ನು ಚೆನ್ನಾಗಿ 30 ನಿಮಿಷದ ಕಾಲ ಕುದಿಸಬೇಕು.. ಅನಂತರ ಒಲೆಯಿಂದ ಕೆಳಗಿಳಿಸಿ ಆರಿಸಬೇಕು.. ಆರಿದ ನಂತರ ಅದನ್ನು ದಿನವೂ ಕುಡಿಯುತ್ತಾ ಬರಬೇಕು.. ಇದರಿಂದಾಗಿ ದೇಹದಲ್ಲಿನ ಮಲಿನಗಳೆಲ್ಲವೂ ಹೊರಹೋಗುತ್ತವೆ..
ಆಂಟಿಆಕ್ಸಿಡೆಂಟ್ಸ್ ಹೊಂದಿರುವ ಬಾರ್ಲಿ ನೀರು;
ಬಾರ್ಲಿ ನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.. ಇದರಲ್ಲಿ ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಯಥೇಚ್ಛವಾಗಿವೆ.. ಹೀಗಾಗಿ ನಮ್ಮ ದೇಹಕ್ಕೆ ಇದು ಆರೋಗ್ಯದ ರಕ್ಷಣೆ ನೀಡುತ್ತದೆ.. ಗ್ಯಾಸ್-ಹಾರ್ಟ್ ಬರ್ನ್ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಈ ಬಾರ್ಲಿ ನೀರನ್ನು ಕುಡಿಯುತ್ತಾ ಬರಬೇಕು. ಇದಲ್ಲಿ ಫೈಬರ್ ಸಮೃದ್ಧವಾಗಿರುವುದರಿಂದ ಗ್ಯಾಸ್ ಟ್ರಬಲ್ ಪ್ರಾಬ್ಲಂ ನಿವಾರಿಸುತ್ತದೆ. ಇದು ಉತ್ತಮ ಜೀರ್ಣಕಾರಿಯಾಗಿದೆ.. ಇದರಿಂದಾಗಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
ಬೇಸಿಗೆಯಲ್ಲಿ ಇದನ್ನು ಕುಡಿಯಲೇಬೇಕು;
ಬೇಸಿಗೆಯಲ್ಲಿ ನಿರ್ಜಲೀಕರಣದ ಅಪಾಯ ಹೆಚ್ಚು. ಈ ಸಮಯದಲ್ಲಿ ಬಾರ್ಲಿ ನೀರನ್ನು ಕುಡಿಯುವುದರಿಂದ, ನೀವು ಈ ಸಮಸ್ಯೆಯನ್ನು ತಪ್ಪಿಸಬಹುದು. ಇದಲ್ಲದೆ, ಈ ಡಿಟಾಕ್ಸ್ ಪಾನೀಯವು ಬಿಸಿ ವಾತಾವರಣದಲ್ಲಿಯೂ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಬಾರ್ಲಿ ನೀರು ಕುಡಿಯುವುದರಿಂದ ದೇಹದಿಂದ ಎಲ್ಲಾ ಮಾಲಿನ್ಯಕಾರಕಗಳನ್ನು ಹೊರಹೋಗುತ್ತವೆ. ಮೂತ್ರಪಿಂಡಗಳಲ್ಲಿ ಕೂಡಾ ಯಾವುದೇ ಮಾಲಿನ್ಯಕಾರಕ ಸಂಗ್ರಹವಾಗುವುದಿಲ್ಲ. ಇದು ಮೂತ್ರಪಿಂಡದ ಕಲ್ಲುಗಳು ಮತ್ತು ಸೋಂಕಿನ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. ಬಾರ್ಲಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹವನ್ನು ವಿವಿಧ ರೋಗಗಳಿಂದ ಸಂರಕ್ಷಣೆ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಕೂಡಾ ಇದು ಸಹಾಯಕಾರಿ;
ಜಿಮ್‌ಗೆ ಹೋಗುವವರು ಹಾಗೂ ತೂಕ ಇಳಿಸಿಕೊಳ್ಳಲು ಬಯಸುವವರು ಬಾರ್ಲಿ ನೀರನ್ನು ನಿಯಮಿತವಾಗಿ ಸೇವನೆ ಮಾಡಬಹುದು.. ಇದು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಹೀರಿಕೊಂಡು ದೇಹದ ಆರೋಗ್ಯವನ್ನು ಕಾಪಾಡುತ್ತದೆ.. ಇದರಿಂದಾಗಿ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.. ಬಿಪಿ ಇರುವವರಿಗೆ ಕೂಡಾ ಇದು ಸಾಕಷ್ಟು ಸಹಾಯ ಮಾಡುತ್ತದೆ.. ಬಾರ್ಲಿ ನೀರು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಉಪ್ಪಿನ ಪ್ರಮಾಣ ಕಡಿಮೆ ಮಾಡಿ, ಇದು ಮೂತ್ರಪಿಂಡದ ಆರೋಗ್ಯವನ್ನೂ ಸುಧಾರಿಸುತ್ತದೆ.
ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣ;
ಬಾರ್ಲಿಯು ಫೈಬರ್ ಅನ್ನು ಹೊಂದಿದೆ.. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಂದರೆ ಮಧುಮೇಹದಿಂದ ಬಳಲುತ್ತಿರುವವರು ಬಾರ್ಲಿ ನೀರನ್ನು ಸೇವಿಸಬಹುದು. ಇದಲ್ಲದೆ, ಬಾರ್ಲಿಯ ಗ್ಲೈಸೆಮಿಕ್ ಸೂಚ್ಯಂಕ ಕೂಡ ಕಡಿಮೆ ಇದೆ. ಆದ್ದರಿಂದ ಇದು ಮಧುಮೇಹ ರೋಗಿಗಳಿಗೆ ಉಪಯುಕ್ತವಾಗಿದೆ. ಇದಲ್ಲದೆ, ಬಾರ್ಲಿ ನೀರು ಮೂತ್ರದ ಸಮಸ್ಯೆಗಳನ್ನು ಕೂಡಾ ನಿವಾರಣೆ ಮಾಡುತ್ತದೆ. ಅದಕ್ಕಾಗಿಯೇ ಬಾರ್ಲಿ ನೀರನ್ನು ಕುಡಿಯಲು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ.