ಅತ್ತೆ ಮಗಳು ಪ್ರೀತಿಗೆ ನೋ ಎಂದಳು!; ಮೈಸೂರಿನ ಯುವಕ ಹೋಗಿದ್ದೆಲ್ಲಿ?
ಮೈಸೂರು; ಯುವಕನೊಬ್ಬ ಅತ್ತೆ ಮಗಳನ್ನು ಪ್ರೀತಿ ಮಾಡುತ್ತಿದ್ದ.. ಆದ್ರೆ ಅತ್ತೆ ಮಗಳು ಆತನ ಪ್ರೀತಿಗೆ ನೋ ಎಂದಿದ್ದಾಳೆ.. ಇದರಿಂದ ಮನನೊಂದ ಯುವಕ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾನೆ.. ಮೈಸೂರಿನ ಸಿದ್ದರಾಮಯ್ಯ ನಗರದಲ್ಲಿ ಈ ಘಟನೆ ನಡೆದಿದೆ..
ಮಹದೇವು ಎಂಬುವವರ ಪುತ್ರ 26 ವರ್ಷದ ರವಿ ಎಂಬಾತನೆ ನಾಪತ್ತೆಯಾದವನು.. ರವಿ ಸೆಪ್ಟೆಂಬರ್ 10 ರಂದು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾನೆ.. ಇದುವರೆಗೂ ಆತ ಪತ್ತೆಯಾಗಿಲ್ಲ. ಈ ಬಗ್ಗೆ ಮಾತನಾಡಿರುವ ರವಿ ತಂದೆ ಮಹದೇವು, ನನ್ನ ಸಹೋದರಿ ಮಗಳನ್ನು ಆತ ಪ್ರೀತಿ ಮಾಡುತ್ತಿದ್ದ.. ಆದ್ರೆ ಅತ್ತೆ ಮಗಳು ರವಿ ಪ್ರೀತಿಗೆ ನೋ ಎಂದಿದ್ದಾಳೆ.. ಇದರಿಂದ ಮನನೊಂದು ನಾಪತ್ತೆಯಾಗಿದ್ದಾನೆ. ಮನೆಯಲ್ಲಿ ಡೆತ್ ನೋಟ್ ಸಿಕ್ಕಿದೆ ಎಂದು ಹೇಳಿದ್ದಾರೆ.
ಯಾರೂ ಕೂಡಾ ನನ್ನನ್ನು ಹುಡುಕೋದಕ್ಕೆ ಹೋಗಬೇಡಿ.. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿರುವುದಾಗಿ ರವಿ ಅವರ ತಂದೆ ಮಹದೇವು ತಿಳಿಸಿದ್ದಾರೆ.
ಈ ಸಂಬಂಧ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.