CrimeNational

ಬುದ್ಧಿ ಹೇಳಿದ್ದಕ್ಕೆ ತಾಯಿಯನ್ನೇ ಕೊಂದ ಮಗಳು!

ಮುಂಬೈ; ಮೊಬೈಲ್ ಬಳಸದಂತೆ ಬುದ್ಧಿ ಹೇಳಿದ್ದಕ್ಕೆ ಮಗಳು ಹಾಗೂ ಸಾಕು ಮಗ ಸೇರಿಕೊಂಡು ತಾಯಿಯನ್ನೇ ಕೊಂದಿದ್ದಾರೆ.. ಮುಂಬೈನ ಮಹೇಲಿ ಪಾನ್ವೆಲ್ ಎಂಬಲ್ಲಿ ಈ ಘಟನೆ ನಡೆದಿದೆ.. ಪ್ರಿಯಾ ನಾಯಕ್ ಎಂಬ ಮಹಿಳೆಯೇ ಮಗಳಿಂದ ಕೊಲೆಯಾದವರು.. ಇದೀಗ ಪೊಲೀಸರು ಹಾಗೂ ದತ್ತು ಮಗನನ್ನು ಬಂಧಿಸಲಾಗಿದೆ.. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ..

  ಪ್ರಿಯಾ ನಾಯಕ್ ಮಗಳು ಪ್ರಣೀತ ಪಾಟೀಲ್ ಹಾಗೂ ದತ್ತು ಮಗ ನಿಶಾಂತ್ ಬಂಧಿತ ಆರೋಪಿಗಳು.. ಪ್ರಣೀತಾ ಪಾಟೀಲ್ ಗೆ ಮದುವೆಯಾಗಿದೆ.. 5 ವರ್ಷದ ಮಗಳಿದ್ದಾಳೆ.. ಆದ್ರೆ ಗಂಡನ ಜೊತೆ ಜಗಳ ಮಾಡಿಕೊಂಡು ತಾಯಿ ಮನೆ ಸೇರಿದ್ದಾಳೆ.. 2 ವರ್ಷಗಳಿಂದ ತಾಯಿ ಜೊತೆಯೇ ಇದ್ದಳು.. ಪ್ರಣೀತಾ ಪಾಟೀಲ್ ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.. ಆತನ ಜೊತೆ ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುತ್ತಿದ್ದಳು.. ಇದರಿಂದ ತಾಯಿ ಪ್ರಿಯಾ ಬುದ್ಧಿ ಹೇಳಿದ್ದಾಳೆ. ಮೊಬೈಲ್ ಕಸಿದುಕೊಂಡಿದ್ದಾಳೆ.. ಆ ಯುವಕನೊಂದಿಗೆ ಮಾತನಾಡಬೇಡ ಎಂದು ಎಚ್ಚರಿಕೆ ಕೊಟ್ಟಿದ್ದಾಳೆ.. ಇದರಿಂದ ಪ್ರಣೀತಾ ಪಾಟೀಲ್ ಆಕ್ರೋಶಗೊಂಡು ಸಹೋದರ ಹಾಗೂ ಮತ್ತೊಬ್ಬನ ನೆರವು ಪಡೆದು ತಾಯಿಯನ್ನು ಕೊಂದಿದ್ದಾಳೆ.

  ವಿವೇಕ್ ಪಾಟೀಲ್ ಎಂಬಾತನಿಗೆ ಹಣದ ಅವಶ್ಯಕತೆ ಇದ್ದುದರಿಂದ ಪ್ರಣೀತಾ ಪಾಟೀಲ್ ಆತನಿಗೆ ಸುಪಾರಿ ಕೊಟ್ಟಿದ್ದಳು. ನ ನ್ನ ತಾಯಿಯನ್ನು ಕೊಂದರೆ 10 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದಳು . ವಿವೇಕ್ ಪ್ರಿಯಾ ಅವರ ದತ್ತು ಮಗ ನಿಶಾಂತ್ ಪಾಂಡೆ ಸಹಾಯದಿಂದ ಸೆಪ್ಟೆಂಬರ್ 13 ರಂದು ಪ್ರಿಯಾ ನಾಯ್ಕ್ ಅವರನ್ನು ಅವರ ಮನೆಯಲ್ಲೇ ಕೊಲೆ ಮಾಡಿದ್ದರು.

Share Post