HealthNational

ಮಗನ ಹುಟ್ಟಹಬ್ಬದ ಪಾರ್ಟಿಯಲ್ಲೇ ಹೃದಯಾಘಾತ!; ಕುಸಿದುಬಿದ್ದು ಮಹಿಳೆ ಸಾವು!

ಗುಜರಾತ್‌; ಮಗನ ಹುಟ್ಟುಹಬ್ಬದ ಖುಷಿಯಲ್ಲಿದ್ದ ತಾಯಿ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.. ಗುಜರಾತ್‌ನ ವಲ್ಸಾದ್‌ನ ರಾಯಲ್ ಶೆಲ್ಟರ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.. ಮಹಿಳೆಯೊಬ್ಬರು ತನ್ನ ಮಗ ಹುಟ್ಟುಹಬ್ಬದ ಪಾರ್ಟಿಯನ್ನು ಹೋಟೆಲ್‌ನಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದಾರೆ.. ಎಲ್ಲರೂ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸುತ್ತಿದ್ದಾಗಲೇ ತಾಯಿಗೆ ಹೃದಯಾಘತವಾಗಿದೆ.. ಅಲ್ಲಿಯೇ ಕುಸಿದುಬಿದ್ದು ಆಕೆ ಸಾವನ್ನಪ್ಪಿದ್ದಾಳೆ..
ಈ ಹೃದಯವಿದ್ರಾವಕ ಗಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಮಹಿಳೆ ಕುಸಿದುಬೀಳುತ್ತಿದ್ದಂತೆ ಅಲ್ಲಿದ್ದವರು ಆಕೆಯ ಬಳಿ ಓದಡಿ ಬಂದಿದ್ದಾರೆ.. ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.. ಆದ್ರೆ ಅಷ್ಟರಲ್ಲಾಗಲೇ ಮಹಿಳೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.. ವಿಡಿಯೋದಲ್ಲಿ ಕುಸಿದುಬೀಳುವ ಮೊದಲು ಮಹಿಳೆ ತನ್ನ ಗಂಡನ ಭುಜದ ಮೇಲೆ ವಾಲುತ್ತಿರುವುದನ್ನು ನೋಡಬಹುದು..

Share Post