HealthInternationalLifestyle

ಮಾನಸಿಕ ಒತ್ತಡ ನಿವಾರಣೆಗೆ ಸ್ಲೀಪ್‌ ಟೂರಿಸಂ ಮದ್ದು!

ಬೆಂಗಳೂರು; ಈ ಬ್ಯುಸಿ ಲೈಫ್‌ನಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ.. ಇದರಿಂದಾಗಿ ಎಷ್ಟೋ ಜನಕ್ಕೆ ರಾತ್ರಿ ವೇಳೆ ಸರಿಯಾಗಿ ನಿದ್ದೆ ಬರುತ್ತಿಲ್ಲ.. ನಿದ್ದೆ ಬರದ ಕಾರಣಕ್ಕಾಗಿ ಹಲವಾರು ಕಾಯಲೆಗಳಿಗೆ ಕಾರಣವಾಗುತ್ತಿದೆ.. ಹೀಗಾಗಿ ನಿದ್ದೆ ಮಾಡೋದಕ್ಕೂ ಜನ ಪ್ರವಾಸ ಹೋಗಬೇಕಾದಂತಹ ಪರಿಸ್ಥಿತಿ.. ಪ್ರವಾಸ ಅಂದ್ರೆ, ಸುತ್ತಾಡೋದಕ್ಕೆ, ಸ್ವಚ್ಛಂಧ ಸ್ಥಳಗಳನ್ನು ನೋಡೋದಕ್ಕೆ ಹೋಗುತ್ತೇವೆ.. ಆದ್ರೆ ಈಗ ಸ್ಲೀಪ್‌ ಟೂರಿಸಂ ಹೆಚ್ಚು ಜನಪ್ರಿಯವಾಗುತ್ತಿದೆ.. ಇದರ ಮುಖ್ಯ ಉದ್ದೇಶ ಹಚ್ಚಹಸಿರಿನ ಪರಿಸರದಲ್ಲಿ ನಿಶ್ಚಿಂತೆಯಿಂದ ನಿದ್ದೆ ಮಾಡುವುದು. ಈ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು.
ಮನೆಯಲ್ಲಿ ಸರಿಯಾಗಿ ನಿದ್ದೆ ಮಾಡಲಾಗದವರು ರಜೆಯ ಸಮಯದಲ್ಲಿ ನಿಸರ್ಗದ ಮಡಿಲಲ್ಲಿ ಸುಖನಿದ್ರೆ ಮಾಡಲು ಹೋಗುವುದೇ ಸ್ಲೀಪ್‌ ಟೂರಿಸಂ.. ಇದೀಗ ಇಂತಹದ್ದೊಂದು ಟ್ರೆಂಡಿಂಗ್‌ ಶುರುವಾಗಿದೆ.. ಇದು ನಿಮ್ಮನ್ನು ರೀಚಾರ್ಜ್ ಮಾಡಲು ಒಂದು ಮಾರ್ಗವಾಗಿದೆ. ಈ ರೀತಿಯಾಗಿ ನೀವು ಬಿಡುವಿಲ್ಲದ ಕೆಲಸದ ನಡುವೆ ನಿಮ್ಮ ಜೀವನದಲ್ಲಿ ಸ್ವಲ್ಪ ಸಮಯವನ್ನು ಸುಖವಾಗಿ ಕಳೆಯಬಹುದು. ನಿದ್ರೆ ಯಾರ ಮನಸ್ಸನ್ನು ಬೇಕಾದರೂ ಬಹುಬೇಗ ಶಾಂತಗೊಳಿಸುತ್ತದೆ. ಇದರ ಜೊತೆಗೆ ಮಾನಸಿಕ ಆರೋಗ್ಯ ಕೂಡಾ ಸುಧಾರಿಸುತ್ತದೆ..
ಈ ರೀತಿಯ ಸ್ಲೀಪ್‌ ಟೂರಿಸಂನಲ್ಲಿ ಈಜು, ಟ್ರೆಕ್ಕಿಂಗ್, ಪಾರ್ಲರ್ ಸೆಷನ್, ಯೋಗ ಜೊತೆಗೆ ಮಲಗುವ ವಾತಾವರಣವಿರುತ್ತದೆ.. ಉತ್ತನ ನೈಸರ್ಗಿಕ ಗಾಳಿಯ ಅಸ್ವಾದಿಸುತ್ತಾ ಎಲ್ಲಾ ಜಂಜಾಟಗಳನ್ನು ಮರೆತು ಆಗಾಗ ಕೆಲ ದಿನ ಕಣ್ತುಂಬಾ ನಿದ್ದೆ ಮಾಡಿ ಬಂದರೆ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಬಹುದು..
ರಿಶಿಕೇಶ, ಗೋವಾ, ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಹಲವು ಸ್ಥಳಗಳು ಈ ಸ್ಲೀಪ್‌ ಟೂರಿಸಂಗೆ ಸೂಕ್ತವಾಗಿದೆ..

Share Post