HealthNational

70 ವರ್ಷದ ಪಿತ್ತಕೋಶದಲ್ಲಿ 6110 ಕಲ್ಲುಗಳು ಪತ್ತೆ!

ಕೋಟಾ(ರಾಜಸ್ಥಾನ); 70 ವರ್ಷದ ವೃದ್ಧನ ಪಿತ್ತಕೋಶದಲ್ಲಿ 6110 ಕಲ್ಲುಗಳು ಕಂಡುಬಂದಿದ್ದು, ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಅವುಗಳನ್ನು ಹೊರತೆಗೆದಿದ್ದಾರೆ.. ರಾಜಸ್ಥಾನದ ಕೋಟಾದ ಖಾಸಗಿ ಆಸ್ಪತ್ರೆಯ ವೈದ್ಯರು ಈ ಸಾಧನೆ ಮಾಡಿದವರಾಗಿದ್ದಾರೆ.. ಇದಕ್ಕಾಗಿ ಅವರು ಒಟ್ಟು 6 ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ್ದಾರೆ..
ಬುಂಡಿ ಜಿಲ್ಲೆಯ ಪದಾಂಪುರದ 70 ವರ್ಷದ ವೃದ್ಧ ಹೊಟ್ಟೆನೋವು, ಗ್ಯಾಸ್ಟ್ರಿಕ್‌, ಹೊಟ್ಟೆಯುಬ್ಬರ, ವಾಂತಿ ಸಮಸ್ಯೆಯಿಂದ ಬಳಲುತ್ತಿದ್ದ.. ಕಳೆದ 18 ತಿಂಗಳಿಂದ ವೃದ್ಧ ತೀವ್ರ ಅನಾರೋಗ್ಯಕ್ಕೀಡಾಗಿದ್ದ.. ಈ ಮೊದಲು ಆತ ಕೋಟಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.. ವೈದ್ಯರು ವಿವಿಧ ಪರೀಕ್ಷೆಗಳನ್ನು ನಡೆಸಿದಾಗ ವೃದ್ಧನ ಪಿತ್ತಕೋಶದಲ್ಲಿ ಕಲ್ಲುಗಳು ಇದ್ದುದು ಕಂಡುಬಂದಿದೆ.. ಕೂಡಲೇ ಶಸ್ತ್ರಚಿಕಿತ್ಸೆಗೆ ವೈದ್ಯರು ನಿರ್ಧಾರ ಮಾಡಿದ್ದಾರೆ.. ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ.ದಿನೇಶ್ ಕುಮಾರ್ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಿದ್ದು, ಅದರಲ್ಲಿ ಯಶಸ್ವಿಯಾಗಿದ್ದಾರೆ..

 

Share Post