LifestyleNational

ಆರ್ಡರ್‌ ಮಾಡಿದ್ದು ಪುರುಷರ ಅಂಡರ್‌ವೇರ್‌; ಆದ್ರೆ ಬಂದಿದ್ದು ಮಹಿಳೆಯರದ್ದು!

ನವದೆಹಲಿ; ಆನ್‌ಲೈನ್‌ ಶಾಪಿಂಗ್‌ ವೇಳೆ ನಾನಾ ರೀತಿಯ ಅವಾಂತರಗಳು ನಡೆಯುತ್ತಿರುತ್ತವೆ.. ಒಮ್ಮೊಮ್ಮೆ ನಾವು ಏನನ್ನೋ ಆರ್ಡರ್‌ ಮಾಡಿದ್ದರೆ, ಅವರು ಬೇರಿನ್ನೇನನ್ನೋ ಕಳುಹಿಸಿಬಿಟ್ಟಿರುತ್ತಾರೆ.. ಇಲ್ಲಿ ಅದೇ ರೀತಿಯ ಸನ್ನಿವೇಶ ನಡೆದಿದೆ.. ಅಷ್ಟೇ ಅಲ್ಲ, ಆರ್ಡರ್‌ ಮಾಡಿದವನ ಮುಜುಗರಕ್ಕೂ ಕಾರಣವಾಗಿದೆ.. ಯಾಕಂದ್ರೆ ವ್ಯಕ್ತಿಯೊಬ್ಬ ಪುರುಷರ ಅಂಡರ್‌ವೇರ್‌ ಆರ್ಡರ್‌ ಮಾಡಿದ್ದಾನೆ.. ಆರ್ಡರ್‌ ಬ್ಲಿಂಕ್‌ ಇಟ್‌ ಇ ಕಾಮರ್ಸ್‌ ವೆಬ್‌ಸೈಟ್‌, ಮಹಿಳೆಯರು ಧರಿಸುವ ಬಿಕಿನಿಗಳನ್ನು ಕಳುಹಿಸಿಕೊಟ್ಟಿದೆ.. ಇದನ್ನು ನೋಡಿ ಗ್ರಾಹಕ ಹೌಹಾರಿದ್ದಾನೆ..
ಪ್ರಿಯಾಂಶು ಎಂಬ ವ್ಯಕ್ತಿಗೆ ಇಂತಹ ಅನುಭವವಾಗಿದೆ.. ಆತ ತನ್ನ ಅನುಭವವನ್ನು ಫೋಟೋ ಸಮೇತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಪ್ರಿಯಾಂಶು ಅವರು ಬ್ಲಿಂಕ್‌ ಇಟ್‌ನಲ್ಲಿ ಮೆನ್ಸ್‌ ಅಂಡರ್‌ವೇರ್‌ ಆರ್ಡರ್‌ ಮಾಡಿದ್ದು, ಆದ್ರೆ ಅವರು ಮಹಿಳೆಯರ ಒಳ ಉಡುಪು ಕಳುಹಿಸಿದ್ದಾರೆ.. ಈ ಬಗ್ಗೆ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ತಿಳಿಸಿದರೂ ರಿಟರ್ನ್‌ ತೆಗೆದುಕೊಂಡಿಲ್ಲ.. ಜೊತೆಗೆ ರೀಫಂಡ್‌ ಕೂಡಾ ಮಾಡಿಲ್ಲ.. ಹೀಗಾಗಿ ಗ್ರಾಹಕ ತನಗಾದ ಅನುಭವವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಇದಕ್ಕೆ ಜನರಿಂದ ತರಹೇವಾರಿ ಕಮೆಂಟ್‌ಗಳ ಬಂದಿವೆ..
ಒಬ್ಬ ವ್ಯಕ್ತಿ ಇದಕ್ಕೆ ಒಂದೇ ಪರಿಹಾರ ನೀವು ಸೆಕ್ಸ್‌ ಚೇಂಜ್‌ ಆಪರೇಷನ್‌ ಮಾಡಿಸಿಕೊಳ್ಳಿ ಎಂದು ಕಮೆಂಟ್‌ ಹಾಕಿದ್ದಾನೆ.. ಮತ್ತೊಬ್ಬ ಒಂದು ಅಂಡರ್‌ವೇರ್‌ ಬದಲು ಈಗ ಮೂರು ಬಂದಿವೆ, ಖುಷಿ ಪಡಿ ಎಂದಿದ್ದಾನೆ.. ಇನ್ನೊಂದು ನಿಮಗೆ ಹೆಣ್ಣಿನ ಒಳ ಉಡುಪು ಧರಿಸುವ ಅವಕಾಶ ಸಿಕ್ಕಿದೆ ಟ್ರೈ ಮಾಡಿ ನೋಡಿ ಎಂದು ಕಮೆಂಟ್‌ ಮಾಡಿದ್ದಾರೆ..

Share Post