CrimeNational

ಪೂಜೆ ನೆಪದಲ್ಲಿ ಬಾಲಕಿಗೆ ಪೂಜಾರಿಯಿದ ಲೈಂಗಿಕ ಕಿರುಕುಳ!

ಹೈದರಾಬಾದ್‌; ನಕಲಿ ಬಾಬಾಗಳು, ಪೂಜಾರಿಗಳು ಮಹಿಳೆಯರು, ಹೆಣ್ಣು ಮಕ್ಕಳನ್ನು ಯಾಮಾರಿಸಿ ಅವರ ಮೇಲೆ ಪೈಶಾಚಿಕ ಕೃತ್ಯ ಎಸಗುವುದನ್ನು ನೋಡಿದ್ದೇವೆ.. ಅದೇ ರೀತಿಯ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.. ಇಲ್ಲಿನ ಪಾತಬಸ್ತಿ ಪ್ರದೇಶದಲ್ಲಿ ಪೂಜಾರಿಯೊಬ್ಬ ಬಾಲಕಿಯನ್ನು ಪೂಜೆಯ ನೆಪದಲ್ಲಿ ಕೊಠಡಿಯೊಂದಕ್ಕೆ ಕರೆದೊಯ್ದು ಆಕೆಯ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ..
ಏನೋ ಸಮಸ್ಯೆ ಹೇಳಿಕೊಂಡು ದಂಪತಿ ತನ್ನ ಮಗಳನ್ನು ಪೂಜಾರಿಯೊಬ್ಬರ ಬಳಿ ಕರೆದುಕೊಂಡು ಹೋಗಿದ್ದಾರೆ.. ಈ ವೇಳೆ ಪೂಜಾರಿ ಪ್ರತ್ಯೇಕವಾಗಿ ಪೂಜೆ ಮಾಡಬೇಕೆಂದು ಬಾಲಕಿಯನ್ನು ಕೊಠಡಿಗೆ ಕರೆದುಕೊಂಡು ಹೋಗಿದ್ದಾನೆ.. ಅಲ್ಲಿ ಬಾಲಕಿಯ ಮೇಲೆ ಪೂಜಾರಿ ಅನುಚಿತವಾಗಿ ವರ್ತನೆ ಮಾಡಿದ್ದಾನೆ.. ಅರ್ಚಕನ ದೌರ್ಜನ್ಯ ತಡೆಯಲಾಗದೆ ಬಾಲಕಿ ಕಿರುಚಿಕೊಂಡು ಕೊಠಡಿಯಿಂದ ಹೊರಗೆ ಓಡಿ ಬಂದಿದ್ದಾಳೆ. ಕೂಡಲೇ ಆಕೆ ಅಳುತ್ತಾ ತನ್ನ ಪೋಷಕರಿಗೆ ಒಳಗೆ ದೌರ್ಜನ್ಯವನ್ನು ತಿಳಿಸಿದ್ದಾಳೆ. ಪೋಷಕರಿಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಬಂಧಿಸಿದ್ದಾರೆ.
ಹೈದರಾಬಾದ್‌ನ ಬಹದ್ದೂರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಯನ್ನು ರಾಮಕಿಶೋರ್ ಜೋಶಿ ಎಂದು ಗುರುತಿಸಲಾಗಿದೆ. ಪೂಜಾರಿ ಬಹದ್ದೂರ್ ಪುರ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸವಾಗಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

Share Post