ಈ ದೇಗುಲಕ್ಕೆ ಹೆಲಿಕಾಪ್ಟರ್ನಲ್ಲಿ ಬರ್ತಾರೆ ಅರ್ಚಕ!
ಛತ್ತಿಸ್ಗಢ; ಎಲ್ಲರ ಮನೆಯಲ್ಲೂ ಗೌರ ಗಣೇಶ ಹಬ್ಬದ ಸಡಗರ ಮನೆ ಮಾಡಿದೆ.. ಎಲ್ಲೆಲ್ಲೂ ಗಣೇಶಮೂರ್ತಿಗಳನ್ನು ತಂದು ಕೂರಿಸಲಾಗುತ್ತಿದೆ.. ಈ ಸಂದರ್ಭದಲ್ಲಿ ವಿಶೇಷವಾದ ಗಣಪತಿ ದೇಗುಲವೊಂದರ ಬಗ್ಗೆ ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ.. ಛತ್ತಿಸ್ಗಢದಲ್ಲಿ ಸುಮಾರು 3 ಸಾವಿರ ಅಡಿ ಎತ್ತರದ ಬೆಟ್ಟಗಳ ಸಾಲಿನಲ್ಲಿ ಬಯಲು ಪ್ರದೇಶದಲ್ಲಿ ಗಣೇಶ ನೆಲೆಸಿದ್ದಾನೆ.. ದನಗಾಹಿಗಳೇ ಹೆಚ್ಚಾಗಿ ಈ ಗಣೇಶನನ್ನು ಪೂಜಿಸುವುದರಿಂದ ಇದಕ್ಕೆ ದನಗಾಹಿ ಗಣಪ ಎಂದು ಹೆಸರು.. ವಿಶೇಷ ಅಂದ್ರೆ ಈ ಗಣೇಶನಿಗೆ ಪೂಜೆ ಸಲ್ಲಿಸಲು ಅರ್ಚಕರು ಹೆಲಿಕಾಪ್ಟರ್ ನಲ್ಲಿ ಬರುತ್ತಾರೆ..
ಛತ್ತೀಸ್ಗಢದ ದಾಂತೇವಾಡದ ಬೈಲಾಡಿಲಾದ ಢೋಲ್ಕಲ್ ಬೆಟ್ಟದ ಈ ವಿಶೇಷ ಗಣೇಶ ನೆಲೆಸಿದ್ದಾನೆ.. ಈ ದೇವರಿಗೆ ಗುಡಿ ಇಲ್ಲ.. ಬಯಲಲ್ಲೇ ಗಣೇಶ ನೆಲೆಸಿದ್ದಾನೆ.. ಇದಕ್ಕೆ ಪುರಾಣದ ಕತೆಯೂ ಕೂಡಾ ಇದೆ.. ಇಲ್ಲಿ ಗಣೇಶ ಹಾಗೂ ಪರಶುರಾಮನ ನಡುವೆ ಯುದ್ಧ ನಡೆದಿದೆ ಎಂದು ಹೇಳಲಾಗುತ್ತದೆ.. ಈ ವೇಳೆ ಪರುಶುರಾಮ ಕೊಡಲಿಯಿಂದ ವಿನಾಯಕನ ಮುಖದ ಮೇಲೆ ದಾಳಿ ಮಾಡಿದ್ದು, ಈ ವೇಳೆ ವಿನಾಯಕ ಒಂದು ಹಲ್ಲು ಮುರಿಯಿತು ಎಂದು ಹೇಳಲಾಗುತ್ತದೆ..