CrimeDistricts

ತುಂಗಭದ್ರಾ ಡ್ಯಾಮ್‌ ಮೇಲೆ ಪ್ರೀವೆಡ್ಡಿಂಗ್‌ ಶೂಟ್‌!; ಅನುಮತಿ ಕೊಟ್ಟಿದ್ದು ಯಾರು.?

ಕೊಪ್ಪಳ(Koppal); ತುಂಗಭದ್ರಾ ಜಲಾಶಯದ ಮೇಲೆ ಭದ್ರತಾ ದೃಷ್ಟಿಯಿಂದ ಯಾವುದೇ ರೀತಿಯ ಚಿತ್ರೀಕರಣ ನಿಷೇಧ ಮಾಡಲಾಗಿದೆ.. ಹೀಗಿದ್ದರೂ, ಇಲ್ಲಿ ಪ್ರೀ ವೆಡ್ಡಿಂಗ್‌ ಶೂಟ್‌ ನಡೆದಿದ್ದು, ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.. ಮೊನ್ನೆ ಮೊನ್ನೆಯಷ್ಟೇ ಜಲಾಶಯದ ಕ್ರೆಸ್ಟ್‌ ಗೇಟ್‌ ಒಂದು ಕೊಚ್ಚಿಹೋಗಿ ಅವಾಂತರ ಸೃಷ್ಟಿ ಮಾಡಿತ್ತು.. ಇಂತಹ ಸಂದರ್ಭದಲ್ಲಿ ಪ್ರೀ ವೆಡ್ಡಿಂಗ್‌ ಶೂಟ್‌ಗೆ ಹೇಗೆ ಅವಕಾಶ ನೀಡಲಾಯಿತು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ..
KA-01 MY 2174 ಬೆಂಗಳೂರು ಪಾಸಿಂಗ್​ ಕಾರನ್ನು ಜಲಾಶಯದ ಮೇಲೆ ತೆಗೆದುಕೊಂಡು ಹೋಗಿದ್ದು, ಅದೆ ಮೇಲೆ ನಿಂತು ಜೋಡಿಗಳು ಫೋಟೋ ಶೂಟ್‌ ಮಾಡಲಾಗಿದೆ.. ಈ ಫೋಟೋಗಳು ಈಗ ವೈರಲ್‌ ಆಗುತ್ತಿವೆ.. ನಿಷೇಧ ಇದ್ದರೂ ಇವರಿಗೆ ಯಾರು ಅನುಮತಿ ನೀಡಿದರು ಎಂಬ ಪ್ರಶ್ನೆ ಎದುರಾಗಿದೆ.. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಸಾರ್ವಜನಿಕರು ಆಗ್ರಹ ಮಾಡುತ್ತಿದ್ದಾರೆ..

Share Post