ಅಂಬುಲೆನ್ಸ್‌ನಲ್ಲಿ ಮಹಿಳೆಗೆ ಕಿರುಕುಳ ಕೊಟ್ಟ ಚಾಲಕ!; ಮುಂದೇನಾಯ್ತು?
ಬೆಂಗಳೂರು; ತೀವ್ರ ಅನಾರೋಗ್ಯಪೀಡಿತ ಪತಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಮಹಿಳೆಗೆ ಅಂಬುಲೆನ್ಸ್ ಚಾಲಕ ಕಿರುಕುಳ ಕೊಟ್ಟ ಘಟನೆ ನಡೆದಿದೆ.. ಇದರಿಂದ ಮಹಿಳೆ ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.. ಉತ್ತರ ಪ್ರದೇಶದ ಲಕ್ನೋ ಬಳಿಯ ಗಾಜಿಪುರದಲ್ಲಿ ಈ ಘಟನೆ ನಡೆದಿದೆ..
ಇದನ್ನೂ ಓದಿ; ದರ್ಶನ್‌ನ ಮದುವೆಯಾಗ್ತೀನಿ ಅಂತ ಜೈಲಿಗೆ ಬಂದ ಮಹಿಳಾ ಅಭಿಮಾನಿ!
ಪತಿಗೆ ಮಾರಣಾಂತಿಕ ಕಾಯಿಲೆ ಇದ್ದಿದ್ದರಿಂದ ಮಹಿಳೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಳು.. ಆದ್ರೆ ಆಸ್ಪತ್ರೆಯವರು 2 ದಿನದ ಚಿಕಿತ್ಸೆಗೆ 1 ಲಕ್ಷ ರೂಪಾಯಿ ಚಾರ್ಜ್ ಮಾಡಿದ್ದರು.. ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೇ ಮಹಿಳೆ ತನ್ನ ಪತಿಯನ್ನು ಡಿಸ್ ಚಾರ್ಜ್ ಮಾಡಿಸಿದ್ದರು.. ಜೊತೆ ಗಂಡನನ್ನು ಕರೆದುಕೊಂಡು ಹೋಗೋದಕ್ಕೆ ಆಸ್ಪತ್ರೆಯವರಿಂದ ನಂಬರ್ ಪಡೆದು ಖಾಸಗಿ ಅಂಬುಲೆನ್ಸ್ ಕರೆಸಿಕೊಂಡಿದ್ದರು.. ಅಂಬುಲೆನ್ಸ್ 150 ಕಿಲೋ ಮೀಟರ್ ದೂರ ಹೋದ ಮೇಲೆ ಪಕ್ಕಕ್ಕೆ ನಿಲ್ಲಿಸಿದ ಅಂಬುಲೆನ್ಸ್ ಡ್ರೈವರ್ ಆಕೆಗೆ ಕಿರಕುಳು ನೀಡಲು ಶುರು ಮಾಡಿದ್ದಾನೆ..
ಇದನ್ನೂ ಓದಿ; ಕುಡುಮಾ ಎಂಬ ಊರಿಗೆ ಧರ್ಮಸ್ಥಳ ಎಂದು ಹೆಸರು ಬಂದಿದ್ದು ಹೇಗೆ..?
ಇದರಿಂದ ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.. ಪೊಲೀಸರು ಬೇರೆ ಅಂಬುಲೆನ್ಸ್‌ನೊಂದಿಗೆ ಅಲ್ಲಿಗೆ ಬಂದಿದ್ದಾರೆ.. ಅಷ್ಟರಲ್ಲಾಗಲೇ ಆರೋಪಿ ತಪ್ಪಿಸಿಕೊಂಡು ಹೋಗಿದ್ದಾನೆ.. ಇತ್ತ ಆಕ್ಸಿಜನ್ ನೆರವಿನೊಂದಿಗೆ ಉಸಿರಾಡುತ್ತಿದ್ದ ಮಹಿಳೆ ಪತಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.. ಈ ಬಗ್ಗೆ ಗಾಜಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..