Lifestyle

ಕಷ್ಟಕ್ಕೆ ಸ್ಪಂದಿಸೋ ಸ್ನೇಹಿತ ಯಾರು..?; ಕಂಡುಹಿಡಿಯೋದು ಹೇಗೆ..?

ಬೆಂಗಳೂರು; ನಮ್ಮ ಕಷ್ಟಕ್ಕೆ ಮನೆಯವರು, ಸಂಬಂಧಿಗಳು ಯಾರೂ ಆಗೋದಿಲ್ಲ.. ಸ್ನೇಹಿತರೇ ಆಗೋದು ಅಂತ ನಾವು ಆಗಾಗ ಮಾತನಾಡುತ್ತೇವೆ.. ಆದ್ರೆ, ಸ್ನೇಹಿತರಲ್ಲೂ ಬಹುತೇಕರು ನಮ್ಮ ಕಷ್ಟಕ್ಕೆ ಆಗೋದಿಲ್ಲ.. ತುಂಬಾ ಕಷ್ಟ ಆಗಿದೆ.. ಸ್ವಲ್ಪ ದುಡ್ಡು ಕೊಡಿ ಅಂತ ಕೇಳಿದರೆ ಇಲ್ಲ ಎನ್ನುವವರೇ ಹೆಚ್ಚು.. ನಾನಾ ಕಥೆಗಳನ್ನು ಕಟ್ಟಿ ಜಾರಿಕೊಳ್ಳುವವರೇ ಹೆಚ್ಚು.. ಹೀಗಾಗಿ, ಚೆನ್ನಾಗಿದ್ದಾಗಲೇ ನನ್ನವರು ಯಾರು ಅನ್ನೋದು ಪರೀಕ್ಷೆ ಮಾಡಬೇಕಾದ ಕಾಲ ಇದು..

ಪ್ರತಿಯೊಬ್ಬರಿಗೂ ಕಾಲ ಒಂದೇ ರೀತಿ ಇರೋದಿಲ್ಲ..  ಯಾವತ್ತಾದರೂ ಒಂದು ದಿನ ಕಷ್ಟ ಬಂದೇ ಬರುತ್ತದೆ.. ಆದ್ರೆ ಇವತ್ತು ಚೆನ್ನಾಗಿರುವ ನಾವು ಹಲವರ ಕಷ್ಟಕ್ಕೆ ಮಿಡಿಯುತ್ತಿರುತ್ತೇವೆ.. ಕಷ್ಟ ಅಂತ ಬಂದವರಿಗೆಲ್ಲಾ ಸಹಾಯ ಮಾಡುತ್ತಿರುತ್ತೇವೆ.. ಆದ್ರೆ ನಮಗೆ ಕಷ್ಟ ಬಂದಾಗ ಅವರೆಲ್ಲಾ ನಮ್ಮ ಸಹಾಯಕ್ಕೆ ಬರುತ್ತಾ..?, ಅರ್ಜೆಂಟ್‌ ಒಂದಿಷ್ಟು ಹಣ ಬೇಕಿದೆ ಅಂದ್ರೆ ಕೊಡ್ತಾರಾ..? ಅದನ್ನು ನಾವು ಚೆನ್ನಾಗಿರುವಾಗಲೇ ಪರೀಕ್ಷೆ ಮಾಡಿದರೆ, ನಮ್ಮ ನಿಜವಾದ ಸ್ನೇಹಿತರನ್ನು ನಾವು ಪಟ್ಟಿ ಮಾಡಬಹುದು.. ಆಗ ನಾವು ಯಾರಿಗೆ ಸಹಾಯ ಮಾಡಬೇಕು..? ಕಷ್ಟ ಬಂದಾಗ ಯಾರು ನಮ್ಮ ಜೊತೆ ನಿಲ್ಲುತ್ತಾರೆ ಅನ್ನೋದು ಅರ್ಥವಾಗುತ್ತದೆ..

ಮೊದಲು ನಿಮ್ಮಿಂದ ಸಹಾಯ ಪಡೆದವರು, ನಿಮಗೆ ಹತ್ತಿರದ ಸ್ನೇಹಿತರು, ಈಗಾಗಲೇ ನಿಮ್ಮಿಂದ ಹಲವಾರು ರೀತಿಯಲ್ಲಿ ನೆರವು ಪಡೆದ ಬಂಧು-ಬಳಗದವರು ಎಲ್ಲಾ ಸೇರಿ 100 ಜನರ ಹೆಸರುಗಳನ್ನು ಪಟ್ಟಿ ಮಾಡಿ.. ಅವರಿಗೆ ಕರೆ ಮಾಡಿ ಕೊಂಚ ಸಮಸ್ಯೆಯಲ್ಲಿದ್ದೇನೆ.. ಕೆಲಸ ಕಳೆದುಕೊಂಡಿದ್ದೇನೆ.. ರೂಪಾಯಿ ರೂಪಾಯಿಗೂ ಕಷ್ಟ ಇದೆ.. ಲೋನ್‌ ಇಎಂಐ ಕಟ್ಟೋಕೆ ಆಗ್ತಿಲ್ಲ.. ಎರಡು ಸಾವಿರ ರೂಪಾಯಿ ರೂಪಾಯಿ ಇದ್ರೆ ಕೊಡ್ತೀರಾ, ಎರಡು ಮೂರು ದಿನದಲ್ಲಿ ವಾಪಸ್‌ ಮಾಡುತ್ತೇನೆ ಎಂದು ಕೇಳಿ ನೋಡಿ.. ಆಗ ಬಹುತೇಕರು ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ.. ಏನೇನೋ ಸಬೂಬು ಹೇಳುತ್ತಾರೆ.. ಯಾರೋ ಕೆಲವರು ಮಾತ್ರ ನಿಮ್ಮ ಕಷ್ಟ ಕೇಳಿ ಹಣವನ್ನು ನಿಮ್ಮ ಅಕೌಂಟ್‌ಗೆ ಕಳುಹಿಸುತ್ತಾರೆ..

ನಿಮಗೆ ಯಾರು ಯಾವ ರೀತಿಯ ಸಬೂಬು ಹೇಳಿದರು ಎಂಬುದರ ಆಧಾರದ ಮೇಲೆ ಅವರನ್ನು ಎಷ್ಟು ದೂರದಲ್ಲಿಡಬೇಕೋ ಅಲ್ಲೇ ಇಡಿ.. ಯಾರು ನೀವು ಕೇಳುತ್ತಿದ್ದಂತೆಯೇ ಸಹಾಯ ಮಾಡಿದರೋ ಅವರಿಗೆ ಬೆನ್ನೆಲುಬಾಗಿ ನಿಲ್ಲಿ.. ಯಾವತ್ತಿಗೂ ನೀವು ಪರೀಕ್ಷೆ ಮಾಡೋದಕ್ಕೆ ಹಣ ಕೇಳಿದ್ದೆ ಎಂದು ಹೇಳೋದಕ್ಕೆ ಹೋಗಬೇಡಿ.. ಸೈಲೆಂಟಾಗಿ ಸೈಡಿಗಿಡೋರನ್ನು ಸೈಡಿಗಿಟ್ಟು, ಹತ್ತಿರ ಸೇರಿಸಿಕೊಳ್ಳುವವರನ್ನು ಹತ್ತಿರಕ್ಕೆ ಬರ ಮಾಡಿಕೊಳ್ಳಿ.. ಆಗ ನಿಮ್ಮ ಜೀವನ ಸುಖಮಯವಾಗಿರುತ್ತದೆ.. ನಿಮಗೆ ಕಷ್ಟದಲ್ಲಿ ಆಗುವವರು ಯಾರು ಅನ್ನೋದು ಗೊತ್ತಾಗುತ್ತದೆ.. ನೀವು ಯಾರ ಪರ ನಿಲ್ಲಬೇಕು ಅನ್ನೋದೂ ಅರ್ಥವಾಗುತ್ತದೆ..

ಒಮ್ಮೊಮ್ಮೆ ಕೆಲವರು ನೀವು ಸಂಕಷ್ಟದಲ್ಲಿದ್ದೀರಿ ಎಂದು ಗೊತ್ತಾಗುತ್ತಿದ್ದರೆ ಎಲ್ಲರಿಗೂ ಪ್ರಚಾರ ಮಾಡಿಕೊಂಡು ಬರುತ್ತಾರೆ.. ಅವನು ಹೀಗೆ ಲಾಸ್‌ ಆಗಿಬಿಟ್ಟಿದ್ದಾನೆ.. ಅವನು ದುಡ್ಡು ಕೇಳಿದರೆ ಕೊಡಬೇಡ ಎಂದೂ ಪ್ರಚಾರ ಮಾಡಿಕೊಂಡು ಬರುತ್ತಾರೆ.. ಅಂತಹವರು ನಿನ್ನ ಫ್ರೆಂಡ್‌ ಲಿಸ್ಟ್‌ ನಲ್ಲಿದ್ದ ಪತ್ತೆಯಾದರೆ ಅವರನ್ನು ಪರ್ಮನೆಂಟಾಗಿ ದೂರ ಇಡಿ..

ಒಂದು ವೇಳೆ ನಿಮಗೆ ಸಹಾಯ ಮಾಡೋದಕ್ಕೆ ಮನಸ್ಸಿದ್ದು, ಅವರ ಪರಿಸ್ಥಿತಿಯೂ ಸರಿಯಿಲ್ಲದಿದ್ದರೆ, ಅದನ್ನು ಪ್ರಾಮಾಣಿಕವಾಗಿ ನಿಮ್ಮ ಮುಂದೆ ಹೇಳಿದರೆ, ಅವರ ಜೊತೆ ನೀವು ನಿಲ್ಲಿ.. ಸಮಸ್ಯೆ ಏನು ಎಂದು ತಿಳಿದುಕೊಂದು ಸಾಧ್ಯವಾದಷ್ಟು ಅವರ ಬೆನ್ನಿಗೆ ನಿಲ್ಲಿ.. ಮುಂದೆ ಅವರೂ ಕೂಡಾ ನಿಮಗೆ ಉಪಯೋಗಕ್ಕೆ ಬರುತ್ತಾರೆ..

 

Share Post