BengaluruCrimePolitics

ಸಿಎಂ ಸಿದ್ದರಾಮಯ್ಯ ಪರವಾಗಿ ಬರುತ್ತಾ ತೀರ್ಪು..?

ಬೆಂಗಳೂರು; ಇಂದು ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆ ಟೆನ್ಷನ್‌ ಶುರುವಾಗಿದೆ.. ಇಂದು ಮಧ್ಯಾಹ್ನ 2.30ಕ್ಕೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಇಂದು ಪ್ರಕರಣ ಸಂಬಂಧ ಆದೇಶ ಹೊರಬೀಳುವ ಎಲ್ಲಾ ಸಾಧ್ಯತೆ ಇದೆ.. ಸಿದ್ದರಾಮಯ್ಯ ಅವರ ರಿಟ್‌ ಅರ್ಜಿಗೆ ಹೈಕೋರ್ಟ್‌ ಮನ್ನಣೆ ನೀಡಿದರೆ, ಸಿಎಂ ಸಿದ್ದರಾಮಯ್ಯ ನಿರಾಳರಾಗಲಿದ್ದಾರೆ.. ಇಲ್ಲದೇ ಇದ್ದರೆ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.. ಸಿಎಂ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ..

ಇದನ್ನೂ ಓದಿ; ಅಪ್ರಾಪ್ತಳ ಖಾಸಗಿ ಅಂಗಕ್ಕೆ ಬಿಸಿ ನೀರು ಸುರಿದ ಬಾಲಕರು!

ಶನಿವಾರ ಮೂರನೇ ವಿಚಾರಣೆ ನಡೆಯಿತು. ಈ ವೇಳೆ ರಾಜ್ಯಪಾಲರ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರೆ, ಪ್ರತಿವಾದಿ ಪ್ರದೀಪ್‌ ಕುಮಾರ್‌ ಪರ ಪ್ರಭುಲಿಂಗ ನಾವದಗಿ, ಸ್ನೇಹಮಯಿ ಕೃಷ್ಣ ಪರವಾಗಿ ಮಣಿಂದರ್‌ ಸಿಂಗ್‌, ಟಿ.ಜೆ.ಅಬ್ರಹಾಂ ಪರವಾಗಿ ರಂಗನಾಥ್‌ ರೆಡ್ಡಿ ವಾದ ಮಂಡಿಸಿದರು.. ಇನ್ನು ಸಿಎಂ ಸಿದ್ದರಾಮಯ್ಯ ಪರವಾಗಿ ಅಭಿಷೇಕ್‌ ಮನು ಸಿಂಘ್ವಿ ಕೌಂಟರ್‌ ವಾದ ಬಾಕಿ ಇದೆ.. ಇಂದು ಅಭಿಷೇಕ್‌ ಮನು ಸಿಂಘ್ವಿ ಪ್ರತಿವಾದ ಮಂಡನೆ ಮಾಡಲಿದ್ದು, ಅವರು ಹೇಗೆ ವಾದ ಮಾಡುತ್ತಾರೆ ಎಂಬುದರ ಮೇಲೆ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ನಿಂತಿದೆ..

ಇದನ್ನೂ ಓದಿ; ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದರು; ನಟಿ ಚಾರ್ಮಿಳಾ ಆರೋಪ

ಹೈಕೋರ್ಟ್‌ನಲ್ಲಿ ಸಿಎಂ ವಿರುದ್ಧದ ತೀರ್ಪು ಬಂದು, ರಾಜ್ಯಪಾಲರ ಆದೇಶ ಎತ್ತಿ ಹಿಡಿದರೆ ಸಿದ್ದರಾಮಯ್ಯ ಅವರಿಗೆ ಕಾನೂನು ಸಂಕಷ್ಟ ಎದುರಾಗಲಿದೆ.. ಆಗ ಅವರು ಸುಪ್ರೀಂಕೋರ್ಟ್‌ ಕದ ತಟ್ಟುವ ಸಾಧ್ಯತೆ ಇದೆ.. ಇದಕ್ಕೂ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಈ ಮಧ್ಯೆ ಸಿದ್ದರಾಮಯ್ಯ ಅವರು ದೇವರ ಮೊರೆ ಹೋಗುತ್ತಿದ್ದಾರೆ.. ವಿಚಾರಣೆ ಮುಗಿದ ಬಳಿಕ ಮೈಸೂರಿಗೆ ತೆರಳುವ ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; 15 ದಿನಗಳ ಕಾಲ ಸಕ್ಕರೆ ಬಳಕೆ ನಿಲ್ಲಿಸಿಬಿಟ್ಟರೆ ನಮ್ಮ ದೇಹದಲ್ಲಿ ಏನಾಗುತ್ತೆ..?

Share Post