ಅಸಭ್ಯವಾಗಿ ವರ್ತಿಸಿದ ಖ್ಯಾತ ನಟನ ಕಪಾಳಕ್ಕೆ ಬಾರಿಸಿದ ನಟಿ!
ಕೇರಳ; ಕೇರಳ ಸಿನಿಮಾ ರಂಗದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಲೈಂಗಿಕ ದೌರ್ಜನ್ಯಗಳ ಬಗ್ಗೆ ಹೇಮಾ ನೇತೃತ್ವದ ಸಮಿತಿ ಬಹಿರಂಗ ಮಾಡಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಕೇರಳ ಸರ್ಕಾರಕ್ಕೆ ಈ ವರದಿ ಸಲ್ಲಿಕೆಯಾಗುತ್ತಿದ್ದಂತೆ ಹಲವು ನಟಿಯರು ತಮಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.. ಇತ್ತೀಚೆಗಷ್ಟೇ ರೇವತಿ ಸಂಪತ್ ಎಂಬ ನಟಿ ಸೀನಿಯರ್ ನಟ ಮುಖೇಶ್, ರಿಯಾಜ್ ಖಾನ್ ಮುಂತಾದವರ ಮೇಲೆ ಆರೋಪ ಮಾಡಿದ್ದರು.. ಇದೀಗ ನಟಿ ಉಷಾ ಕೂಡಾ ಈ ಹಿಂದೆ ತನಗಾದ ಅನುಭವವನ್ನು ಹಂಚಿಕೊಂಡಿದ್ದಾಳಳೆ.. 1992ರಲ್ಲಿ ಮೋಹನ್ ಲಾಲ್ ಜೊತೆ ನಟನೆ ಮಾಡಿದ ಸಂದರ್ಭದಲ್ಲಿ ನಟನೊಬ್ಬ ಅಸಭ್ಯವಾಗಿ ವರ್ತಿಸಿದ್ದರ ಬಗ್ಗೆ ಆ ನಟಿ ಹೇಳಿಕೊಂಡಿದ್ದಾಳೆ..
ಇದನ್ನೂ ಓದಿ; ಗಂಡನ ಎರಡನೇ ಮದುವೆಗೆ ಪತ್ನಿಯೇ ಮುಂದಾಳತ್ವ!
ಆ ಸಿನಿಮಾ ಶೂಟಿಂಗ್ಗಾಗಿ ಚಿತ್ರತಂಡದವರೆಲ್ಲಾ ಬಹ್ರೇನ್ಗೆ ಹೋಗಿದ್ದೆವು.. ಶೂಟಿಂಗ್ ಎಲ್ಲಾ ಮುಗಿದ ಮೇಲೆ ಎಲ್ಲರೂ ಭಾರತಕ್ಕೆ ವಾಪಸ್ ಬರೋದಕ್ಕೆ ಸಿದ್ಧತೆ ನಡೆದಿತ್ತು.. ಲಗೇಜ್ ಎಲ್ಲಾ ತೆಗೆದುಕೊಂಡು ಬನ್ನಿ ಎಂದು ನಟ ಮೋಹನ್ ಲಾಲ್ ನನಗೆ ಹೇಳಿದರು.. ಹೀಗಾಗಿ ನಾನು ಬಟ್ಟೆ ಬರೆ ಎಲ್ಲಾ ಸೂಟ್ಕೇಸ್ಗೆ ತುಂಬಿಸಿಕೊಂಡು ಲಿಫ್ಟ್ ಹತ್ತಿದೆ.. ಅಷ್ಟರಲ್ಲಾಗಲೇ ಒಬ್ಬ ಖ್ಯಾತ ಹಾಗೂ ಹಿರಿಯ ನಟ ಲಿಫ್ಟ್ನಲ್ಲಿದ್ದ.. ಲಿಫ್ಟ್ ಬಾಗಿಲು ಮುಚ್ಚುತ್ತಿದ್ದಂತೆ ಆತ ನನ್ನೊಂದಿಗೆ ಅಸಭ್ಯವಾಗಿ ವರ್ತನೆ ಮಾಡೋದಕ್ಕೆ ಶುರು ಮಾಡಿದ.. ಇದರಿಂದ ನಾನು ಕೋಪಗೊಂಡು ಆತನ ಕಪಾಳಕ್ಕೆ ಬಾರಿಸಿದೆ ಎಂದು ನಟಿ ಉಷಾ ಹೇಳಿಕೊಂಡಿದ್ದಾಳೆ. ನಂತರ ಈ ವಿಚಾರವನ್ನು ನಾನು ನಟ ಮೋಹನ್ ಲಾಲ್ ಅವರಿಗೆ ಹೇಳಿದೆ.. ನೀನು ಸರಿಯಾಗಿ ಮಾಡಿದ್ದೀಯ ಎಂದು ಅವರು ಹೇಳಿದರು.. ಆದ್ರೆ ಈ ಘಟನೆ ನಂತರ ನನಗೆ ಗರ್ವ ಜಾಸ್ತಿ ಎಂದು ಇಂಡಸ್ರ್ಟೀಯಲ್ಲಿ ಪ್ರಚಾರ ನಡೆಯಿತು ಎಂದು ನಟಿ ಉಷಾ ಹೇಳಿದ್ದಾರೆ..
ಇದನ್ನೂ ಓದಿ; ಮಲಗಿದ್ದ ತಾಯಿಯನ್ನು ಕೊಂದೇಬಿಟ್ಟ ಪಾಪಿ ಮಗ!
ಘಟನೆ ನಂತರ ನನಗೆ ಸಿನಿರಂಗದಲ್ಲಿ ಅವಕಾಶಗಳು ಬರಲೇ ಇಲ್ಲ.. ಬರಬರುತ್ತಾ ಕಡಿಮೆಯಾಗುತ್ತಾ ಹೋದವು.. ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ ಈಗ ಬದುಕಿಲ್ಲ.. ಹೀಗಾಗಿಯೇ ನಾನು ಆತನ ಹೆಸರು ಹೇಳುತ್ತಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.. ಈ ಹಿಂದೆ ಒಮ್ಮೆ ಈ ವಿಷಯವನ್ನು ಮೀಡಿಯಾ ಮುಂದೆ ಹೇಳಿದ್ದೆ.. ಈಗ ಈ ವಿಚಾರ ಹೆಚ್ಚು ಪ್ರಚಾರವಾಗುತ್ತಿರುವುದರಿಂದ ಮತ್ತೆ ಹೇಳುತ್ತಿದ್ದೇನೆ ಎಂದು ನಟಿ ಉಷಾ ಹೇಳಿಕೊಂಡಿದ್ದಾರೆ..