ಈ ಪುಣ್ಯಾತ್ಮನಿಗೆ ದಿನಕ್ಕೆ 10 ಬಾರಿ ಸೆಕ್ಸ್ ಬೇಕಂತೆ!; ಬೇಸತ್ತ ಪತ್ನಿ ಮಾಡಿದ್ದೇನು..?
ಪಾಟ್ನಾ(Bihar); ಮದುವೆಯಾದ ಗಂಡ-ಹೆಂಡತಿಯ ನಡುವೆ ಏನಾದರೊಂದು ಕಾರಣಕ್ಕೆ ಜಗಳ ಇದ್ದೇ ಇರುತ್ತದೆ.. ಬಹುತೇಕರು ಅನುಸರಿಸಿಕೊಂಡು ಸಂಸಾರ ನಡೆಸುತ್ತಾರೆ.. ಆದ್ರೆ ಇಲ್ಲೊಬ್ಬ ಮಹಿಳೆಯ ಸಮಸ್ಯೆ ಅನುಸರಿಸಿಕೊಂಡು ಹೋಗುವಂತಹ ಸಮಸ್ಯೆ ಅಲ್ಲವೇ ಅಲ್ಲ.. ಹೀಗಾಗಿ ವಿಧಿಯಿಲ್ಲದೆ ತವರು ಮನೆ ಸೇರಿದ್ದಾಳೆ.. ಈಕೆಯ ಗಂಡ ಒಳ್ಳೆಯವನೇ. ಆದರೆ, ಆತನಿಗೆ ದಿನಕ್ಕೆ ಹತ್ತು ಬಾರಿ ಸೆಕ್ಸ್ ಬೇಕಂತೆ..!. ಪದೇ ಪದೇ ಪಲ್ಲಂಗಕ್ಕೆ ಕರೆಯುವ ಗಂಡನಿಂದ ಬೇಸತ್ತು ಮಹಿಳೆ ತವರು ಮನೆ ಸೇರಿದ್ದಾಳೆ..
ಇದನ್ನೂ ಓದಿ; ಮಲಗಿದ್ದ ತಾಯಿಯನ್ನು ಕೊಂದೇಬಿಟ್ಟ ಪಾಪಿ ಮಗ!
ಈ ಘಟನೆ ನಡೆದಿರೋದು ಬಿಹಾರದ ಪೂರ್ಣಿಯಾ ಎಂಬಲ್ಲಿ.. ಮಹಿಳೆ ತವರು ಹೋದವಳು ನಾನು ವಾಪಸ್ ಬರೋದಿಲ್ಲ ಎಂದು ಹೇಳಿದ್ದಾಳೆ.. ಇತ್ತ ಗಂಡ ನನ್ನ ಪತ್ನಿ ಚಿನ್ನಾಭರಣಗಳನ್ನು ಕದ್ದು ತವರಿಗೆ ಓಡಿಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾನೆ.. ಪೊಲೀಸರು ಮಹಿಳೆಯನ್ನು ಕರೆದು ವಿಚಾರಣೆ ನಡೆಸಿದಾಗ ನಿಜ ವಿಷಯ ಬೆಳಕಿಗೆ ಬಂದಿದೆ.. ಇದು ಖಾಸಗಿ ವಿಷಯ ಎಂದು ಗೊತ್ತಾದ ಮೇಲೆ ಪೊಲೀಸರು, ಕೌಟುಂಬಿಕ ಸಲಹಾ ಕೇಂದ್ರಕ್ಕೆ ಈ ಕೇಸ್ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಅಳಿಯ ಮನೆಗೆ ಬಂದಿದ ನಿವೃತ್ತ ಶಿಕ್ಷಕಿಯನ್ನು ಕಚ್ಚಿ ಸಾಯಿಸಿದ ನಾಯಿಗಳು!
ನನ್ನ ಗಂಡ ಯಾವಾಗಲೂ ಸೆಕ್ಸ್ ಮಾಡುವ ಯೋಚನೆಯಲ್ಲೇ ಇರುತ್ತಾನೆ.. ಹಗಲು, ರಾತ್ರಿ ಎನ್ನದೇ ಯಾವಾಗಲೂ ಪಲ್ಲಂಗಕ್ಕೆ ಕರೆಯುತ್ತಾನೆ.. ದಿನಕ್ಕೆ ಹತ್ತು ಬಾರಿ ಬೇಕಾದರೂ ಸೆಕ್ಸ್ ಮಾಡುತ್ತಾನೆ.. ಇದರಿಂದಾಗಿ ನನಗೆ ಆತನ ಜೊತೆ ಬಾಳೋದಕ್ಕೆ ಆಗೋದಿಲ್ಲ ಎಂದು ಮಹಿಳೆ ಗೋಳು ತೋಡಿಕೊಂಡಿದ್ದಾಳೆ.. ಇನ್ನು ಚಿನ್ನ ಕದ್ದುಕೊಂಡು ಹೋಗಿದ್ದಾಳೆ ಗಂಡನ ಆರೋಪಕ್ಕೆ ತಿರುಗೇಟು ನೀಡಿರುವ ಮಹಿಳೆ, ನನ್ನ ತವರು ಮನೆಯವರು ನೀಡಿರುವ ಆಭರಣಗಳನ್ನಷ್ಟೇ ನಾನು ತೆಗೆದುಕೊಂಡು ಹೋಗಿದ್ದೇನೆ ಎಂದು ಹೇಳಿದ್ದಾರೆ..