HealthLifestyle

ಭೂಮಿ ಮೇಲೆ ಗಂಡಸರೇ ಇಲ್ಲದಂತಾಗ್ತಾರಾ..?; ಆಘಾತಕಾರಿ ಸಂಶೋಧನೆ!

ನವದೆಹಲಿ; ಭೂಮಿ ಮೇಲೆ ಗಂಡು ಜಾತಿ ನಶಿಸಿ ಹೋಗುತ್ತದಾ..? ಗಂಡು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆಯಾ..?, ಕೆಲ ವರ್ಷಗಳು ಹೋದರೆ ಗಂಡು ಸಂತಾನವೇ ಮಾಯವಾಗಿ ಬರೀ ಮಹಿಳೆಯರೇ ಇರುತ್ತಾರಾ..? ಕೊನೆಗೆ ಇದೇ ಭೂಮಿ ಮೇಲೆ ಮನುಷ್ಯನ ಅವಸಾನಕ್ಕೆ ಕಾರಣವಾಗುತ್ತದಾ..? ಇಂತಹದ್ದೊಂದು ಅನುಮಾನ ಶುರುವಾಗುತ್ತಿದೆ.. ಯಾಕಂದ್ರೆ ಗಂಡು ಸಂತಾನಕ್ಕೆ ಕಾರಣವಾಗುವ Y ಕ್ರೋಮೋಸೋಮ್‌ಗಳು ಕಣ್ಮರೆಯಾಗುತ್ತಿವೆಯಂತೆ… ಹೀಗಂತ ಕೆಲ ಸಂಶೋಧನೆಗಳು ಹೇಳುತ್ತಿವೆ..

ಇದನ್ನೂ ಓದಿ; ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೆಸರಲ್ಲೇ ವಂಚನೆ!

ಎಲ್ಲಾ ಪ್ರಾಣಿಗಳಂತೆ ಮಾನವನ ದೇಹದಲ್ಲಿ ಎರಡು ರೀತಿಯ ವರ್ಣತಂತುಗಳಿರುತ್ತವೆ.. ಒಂದು X ಕ್ರೋಮೋಸೋಮ್‌ ಆದ್ರೆ, ಎರಡನೆಯದು Y ಕ್ರೋಮೋಸೋಮ್‌. X ಕ್ರೋಮೋಸೋಮ್‌ ಹೆಣ್ಣು ಮಕ್ಕಳ ಜನನಕ್ಕೆ ಕಾರಣವಾದರೆ, Y ಕ್ರೋಮೋಸೋಮ್‌ ಗಂಡು ಮಕ್ಕಳ ಜನನಕ್ಕೆ ಕಾರಣವಾಗುತ್ತದೆ.. ಆದ್ರೆ ಸಂಶೋಧನೆಗಳ ಪ್ರಕಾರ ಗಂಡು ಮಕ್ಕಳ ಜನನಕ್ಕೆ ಕಾರಣವಾಗುವ Y ಕ್ರೋಮೋಸೋನ್‌ಗಳು ಕಡಿಮೆಯಾಗುತ್ತಿವೆ ಎಂದು ಸಂಶೋಧನೆಗಳು ಹೇಳುತ್ತಿವೆ.. ಇದು ಹೀಗೇ ಮುಂದುವರೆದರೆ ಮುಂದೊಂದು ದಿನ ಗಂಡು ಸಂತಾನವೇ ಇಲ್ಲದಂತಾಗುತ್ತದೆ ಎಂಬ ಭೀತಿ ಎದುರಾಗಿದೆ.. ಹಾಗೇನಾದರೂ ಆದರೆ ಭೂಮಿ ಮೇಲೆ ಮನುಷ್ಯ ಜಾತಿಯೇ ನಾಶವಾಗಿಬಿಡುವ ಅಪಾಯವೂ ಇದೆ..

ಇದನ್ನೂ ಓದಿ; ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲು!

ಜಪಾನ್‌ನಲ್ಲಿ ಸ್ಪೈನಿ ಎಂಬ ಇಲಿಗಳ ಪ್ರಬೇಧದದಲ್ಲಿ Y ಕ್ರೋಮೋಸೋಮ್‌ಗಳು ಬಹುತೇಕ ನಶಸಿಹೋಗಿವೆ.. ಹೀಗಾಗಿ ಅಲ್ಲಿ ಬಹುತೇಕ ಹೆಣ್ಣು ಇಲಿಗಳೇ ಇವೆ.. ಇನ್ನು ಈ ಬಗ್ಗೆ ಕೆಲವು ತಜ್ಞರು ಬೇರೆ ರೀತಿಯ ವ್ಯಖ್ಯಾನಗಳನ್ನು ಮಾಡುತ್ತಿದ್ದಾರೆ.. ಇದರಿಂದ ತೀರಾ ಆತಂಕಪಡುವ ಅಗತ್ಯವಿಲ್ಲ.. ಒಂದು ವೇಳೆ Y ಕ್ರೋಮೋಸೋಮ್‌ಗಳು ನಶಿಸಿಹೋದರೆ ಮತ್ತೊಂದು ಕ್ರೋಮೋಸೋಮ್‌ ಹುಟ್ಟುತ್ತದೆ.. ಹೀಗಾಗಿ ಗಂಡು ಸಂತಾನಕ್ಕೆ ತೊಂದರೆಯಾಗುವುದಿಲ್ಲ ಎಂದು ಹೆಲವರು ಹೇಳುತ್ತಿದ್ದಾರೆ.. ಆದರೂ ಕೂಡಾ Y ಕ್ರೋಮೋಸೋಮ್‌ ನಶಿಸಿ ಹೋಗುತ್ತಿರುವುದನ್ನು ಸಂಶೋಧಕರು ಕಂಡು ಹಿಡಿದಿರುವುದಂತೂ ಸತ್ಯ..

Share Post